ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಬ್ಬ: ಸ್ವಲ್ಪ ಹಣ ತಗೋಬೇಕಿತ್ತು ಬಾ. ಎ.ಟಿ.ಎಂ.ಗೆ ಹೋಗೋಣ.
ನಾಣಿ: ಸುಬ್ಬಾ, ನಿನ್ನ ಪಾಸ್‌ವರ್ಡ್ ನನಗೆ ಗೊತ್ತಾಯ್ತು.
ಸುಬ್ಬ: ನನ್ನ ಪಾಸ್‌ವರ್ಡ್ ಯಾವುದು ಹೇಳು?
ನಾಣಿ: ಎಕ್ಸ್. ಎಕ್ಸ್, ಎಕ್ಸ್, ಎಕ್ಸ್
ಸುಬ್ಬ: ಅಲ್ಲಾ ನನ್ನ ಪಾಸ್‌ವರ್ಡ್ 5467.

Join Our Whatsapp Group

ನಾಣಿ: ಲೋ ಸುಬ್ಬ, ಒಂದು ಸಾವಿರ ರೂಪಾಯಿ ಇದ್ರೆ ಸಾಲವಾಗಿ ಕೊಟ್ಟಿರೋ.
ಸುಬ್ಬ: ಮೊನ್ನೆ ಇನ್ನೂ ಸಂಬಳ ತಗೊಂಡಿದೀಯ, ಆ ಹಣ ಏನಾಯ್ತ?
ನಾಣಿ: ಆ ಹಣ ಜಾಯಿಂಟ್ ಅಕೌಂಟ್ನಲ್ಲಿದೆ. ಅದೇ ಕಷ್ಟ.
ಸುಬ್ಬ: ಜಾಯಿಂಟ್ ಅಕೌಂಟ್ನಲ್ಲಿದ್ರೇನಂತೆ ತಗೋಬಹುದಲ್ಲಾ?
ನಾಣಿ: ಅದು ನನ್ನ ಹೆಂಡ್ತಿ ನಮ್ಮಾವನ ಜಾಯಿಂಟ್ ಅಕೌಂಟ್ನಲ್ಲಿದೆ.

ನಾಣಿ: (ಹೋಟೆಲ್‌ನಲ್ಲಿ) ಮಾಣಿ, ಒಂದು ಗ್ಲಾಸ್ ನೀರು ಕೊಡಯ್ಯ.
ಮಾಣಿ: ಕುಡಿಯಲಿಕ್ಕಾ ಸಾರ್?
ನಾಣಿ: ಇಲ್ಲಾ ಸ್ನಾನ ಮಾಡೋಕೆ.