ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾಣಿ: ನಮ್ಮಪ್ಪ ಸಿಪಾಯಿಯಾಗಿದ್ದಾಗ ಒಂದೇ ಬಾರಿಗೆ ಪಾಕಿಸ್ತಾನಿಗಳ ಕಾಲುಗಳನ್ನ ಕಡಿದುಹಾಕಿದ್ರು ಗೊತ್ತಾ?
ಸುಬ್ಬ: ಹೌದಾ! ತಲೆ ಏಕೆ ಕಡೀಲಿಲ್ಲಾ?
ನಾಣಿ: ಅವರ ತಲೆಗಳನ್ನ ಮುಂಚೆಯೆ ಯಾರೋ ಕಡಿದು ಹಾಕಿದ್ರು.

Join Our Whatsapp Group

ಟೀಚರ್: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಬಲ್ಲದೇ?
ನಾಣಿ: ಬಗ್ಗುತ್ತೆ ಟೀಚರ್.
ಟೀಚರ್: ಅದು ಹೇಗೆ ಹೇಳ್ತಿಯ?
ನಾಣಿ: ನಮ್ಮಜ್ಜ ಹುಡುಗಗಾಗಿದ್ದಾಗ ನೇರವಾಗೇ ಇದ್ರು, ಈಗ ಬಗ್ಗಿಬಿಟ್ಟಿದ್ದಾರೆ

ಸುಬ್ಬ: ನಾಣಿ ಈ ಕಣ್ಣು ರೆಪ್ಪೆ ನೋಡು ಎಷ್ಟು ಹೊಂದಿಕೊಂಡಿವೆ ಅಂದ್ರೆ ಒಟ್ಟಿಗೆ ಮುಚ್ಚುತ್ತವೆ, ಒಟ್ಟಿಗೆ ತೆರೆಯುತ್ತವೆ, ಒಟ್ಟಿಗೆ ನಿದ್ರಿಸುತ್ತವೆ, ಒಟ್ಟಿಗೆ ಕಣ್ಣು ಮಿಟುಕಿಸುತ್ತವೆ. ಆದರೆ ಹುಡುಗಿ ನೋಡಿದಾಗ ಒಂದೇ ಕಣ್ಣು ಕೆಲಸ ಮಾಡುತ್ತೆ. ಇದಕ್ಕೆ ಏನು ಹೇಳ್ತಿಯ?
ನಾಣಿ: ಇದಕ್ಕೆ ನೀತಿ ಇಷ್ಟೇ ಹುಡುಗಿ ಸ್ನೇಹವನ್ನು ಹಾಳು ಮಾಡ್ತಾಳೆ ಅಂತ