ನಾಣಿ: ಡಾಕ್ಟರ್, ನೀವೀಗ ನನಗೆ ಮಾಡುವ ಆಪರೇಷನ್ ಶಾಕ್ ಉಂಟು ಮಾಡುತ್ತಾ?
ಡಾಕ್ಟರ್: ಆಪರೇಷನ್ನಿನಿಂದ ಏನೂ ಆಗೊಲ್ಲ. ನನ್ನ ಬಿಲ್ ನೋಡಿ ಶಾಕ್ ಆಗಬಹುದು.
ನ್ಯಾಯಾಧೀಶ: ಈಗ ಏನು ಅಪರಾಧ ಮಾಡಿದ್ದಾನೆ?
ಲಾಯರ್: ಮೊನ್ನೆ ನಡೆದ ಕೊಲೆಯನ್ನು ಕಣ್ಣಾರೆ ಕಂಡಿದ್ದಾನೆ. ಐ ವಿಟ್ನಸ್ ಅಂತ ಕರೆತಂದೆ.
ನ್ಯಾಯಾಧೀಶ: ಕೊಲೆಗಾರ ಎಲ್ಲಿ?
ಲಾಯರ್: ಹೋದ್ವಾರ ಬೇಲ್ ಮೇಲೆ ಬಿಡುಗಡೆ ಆಟ್ನಲ್ಲ ಸ್ವಾಮಿ.
ನಾಣಿ: ಏನ್ ಸಾರ್ ಈ ಬಾರಿ ಬೆಂಗೂರಿನಲ್ಲಿ ಭಾರಿ ಮಳೆ.
ಮಂತ್ರಿ: ಹೋದ ವರ್ಷ ಬರ ಅಂತ ನೂರಾರು ಕತ್ತೆಗಳ ಮದುವೆ ಮಾಡ್ತಿದ್ವಿ, ಅದರ ಫಲ ಇದು.
ನಾಣಿ: ಐವತ್ತು ಕತ್ತೆಗಳ ಹುಡುಕಿ ಡೈವರ್ಸ್ ಮಾಡಿಸೋಣ ಸಾರ್. ಆಗ ಮಳೆ ಕಡಿಮೆ ಆಗಬಹುದು.