ಸುಬ್ಬಿ: ನಿಮಗೆ ವ್ಯಾಕರಣ ಗೊತ್ತಾ?
ನಾಣಿ: ಅಲ್ವೇ ನಾನು ಕನ್ನಡದಲ್ಲಿ ಎಂ.ಎ. ಮಾಡಿದೀನಿ, ನನಗೆ ವ್ಯಾಕರಣ ಗೊತ್ತಾ ಅಂತ ಕೇಳೀಯಲ್ಲ?
ಸುಬ್ಬಿ: ಹಾಗಾದ್ರೆ ಹೇಳಿ, ನಾನು ಅತ್ಯಂತ ಸುಂದರಿಯಾಗಿದ್ದೇನೆ. ಇದು ಯಾವ ಕಾಲ?
ನಾಣಿ: ಇದು ಭೂತಕಾಲ!
ನಾಣಿ: ನನ್ನ ಹೃದಯದಲ್ಲಿ ಜಾಗ ಕೊಡ್ತೀನಿ, ಬರ್ತೀಯಾ?
ಸುಬ್ಬಿ: ಸಾಕು ಮುಚ್ಚಬಾಯಿ, ಕಾಲಿನಲ್ಲಿರೋ ಚಪ್ಪಲಿ ತೆಗೀಬೇಕಾ?
ನಾಣಿ: ನನ್ನ ಹೃದಯ ದೇವಾಲಯವಲ್ಲ. ಚಪ್ಪಲಿ ಹಾಕ್ಕೊಂಡೇ ಬಾ ಪರವಾಗಿಲ್ಲ.
ನಾಣಿ: ನಿನ್ನ ಹೆಸರೇನು?
ಸುಬ್ಬಿ: ನನ್ನ ಹೆಸರು ಬೇರೆ ಇದೆ. ಆದರೆ ಎಲ್ಲಾ ಪ್ರೀತಿಗೆ ಅಕ್ಕಾ ಅಕ್ಕಾ ಅಂತ ಕರೀತಾರೆ. ನಿಮ್ಮ ಹೆಸರು?
ನಾಣಿ: ನನ್ನ ಎಲ್ಲಾ ಪ್ರೀತಿಗೆ ಭಾವ ಭಾವ ಅಂತ ಕರೀತಾರೆ.














