ಮನೆ ಹಾಸ್ಯ ಹಾಸ್ಯ

ಹಾಸ್ಯ

0

ತಂದೆ: ಚೌಡಯ್ಯನವರ ಹೆಸರು ಕೇಳಿದೀಯೇನೋ?
ನಾಣಿ: ಕೇಳಿದೀನಿ ಕಣಪ್ಪಾ.
ತಂದೆ: ಅವರ ಪಿಟೀಲು ಕೇಳಿದೀಯಾ?
ನಾಣಿ: ಓ! ಅವತ್ತೇ ಕೇಳಿದೆ. ಆದ್ರೆ ಅವರು ಕೊಡಲ್ಲ ಅಂದ್ರು,

Join Our Whatsapp Group

ಶಿಕ್ಷಕ: ಪ್ರಪಂಚದ 3ನೇ ಮಹಾಯುದ್ಧ ನಡೆದರೆ ಏನಾಗುತ್ತೆ?
ನಾಣಿ: ಯುದ್ಧ ನಡೆಯೋದು ಬೇಡ ಸಾರ್, ನಂಗೆ ಭಯವಾಗುತ್ತೆ.
ಶಿಕ್ಷಕ: ಯುದ್ಧವಾದರೆ ಸಾಯ್ತಿನಿ ಅಂತ ಭಯಾನಾ?
ನಾಣಿ: ನನಗೆ ಸಾಯೋಕೆ ಭಯ ಇಲ್ಲಾ ಸಾರ್. ಸಮಾಜ ಪಾಠದಲ್ಲಿ ಮತ್ತೊಂದು ಪಾಠ ಹೆಚ್ಚಾಗುತ್ತಲ್ಲಾ ಅಂತ ಹೆದರಿಕೆ ಅಷ್ಟೆ.

ಸುಬ್ಬ: ಯಾಕೋ ಕೆನರಾಬ್ಯಾಂಕಿನಲ್ಲಿದ್ದ ನಿನ್ನ ಖಾತೆ ಕ್ಲೋಜ್ ಮಾಡಿದೆಯಂತೆ?
ನಾಣಿ: ನಿನ್ನೆ ರಾತ್ರಿ ನನಗೊಂದು ಕನಸು ಬಿತ್ತು. ಯಾರೋ ನನ್ನ ಕೊಲೆ ಮಾಡಿದ ಹಾಗೆ.
ಸುಬ್ಬ: ನಿನ್ನ ಕನಸಿಗೂ ಖಾತೆ ಕ್ಲೋಜ್ ಮಾಡೋಕು ಏನೋ ಸಂಬಂಧ?
ನಾಣಿ: “ಯುವರ್ ಡ್ರಿಮ್ ಕಮ್ಸ್ ಟೂ” ಎಂದು ಬ್ಯಾಂಕಿನವರು ಕ್ಲೋಗನ್ನಿನಲ್ಲಿ ಹೇಳಿದಾರಲ್ಲಾ.