ಮನೆ ಹಾಸ್ಯ ಹಾಸ್ಯ

ಹಾಸ್ಯ

0

ತಂದೆ: ಲೋ ನಾಣಿ, ಮೊಬೈಲ್ ಹಿಡ್ಕೊಂಡು ಏನೋ ಮಾಡ್ತಾ ಇದ್ದೀಯ?
ನಾಣಿ: ನನ್ನ ಸ್ನೇಹಿತನಿಗೆ ಮೆಸೇಜು ಕಳುಸ್ತಾ ಇದ್ದೀನಿ.
ತಂದೆ: ನಿನಗೆ ನೆಟ್ಟಗೆ ಬರಿಯೋಕೆ ಬರೋಲ್ಲ.
ನಾಣಿ: ಏನ್ ತೊಂದ್ರೆ ಇಲ್ಲ. ನನ್ನ ಸ್ನೇಹಿತನಿಗೆ ಓದೋಕೆ ಬರೊಲ್ಲ.

Join Our Whatsapp Group

ಮಹಿಳೆ: ಈ ಬಸ್ಸಿನಲ್ಲಿ ಮಕ್ಕಳಿಗೆ ಅರ್ಧ ಟಿಕೆಟ್ ಜಾರ್ಜ್ ತಾನೆ?
ಕಂಡೇಕ್ಟ‌ರ್: ಹೌದು, ಹನ್ನೆರಡಕ್ಕಿಂತ ಕಡಿಮೆ ಇದ್ದರೆ ಮಾತ್ರ
ಮಹಿಳೆ: ಸದ್ಯ ಒಳಿತಾಯ್ತು. ನನಗೆ ಹತ್ತೇ ಮಕ್ಕಳು.

ಜಡ್ಜ್: ನಿನ್ನ ಮೇಲೆ ಒಂದು ಆರೋಪ ಬಂದಿದೆ.
ನಾಣಿ: ನನ್ನ ಮೇಲೆ ಬಂದಿರೋ ಆರೋಪ ಯಾವುದು ಸ್ವಾಮಿ?
ಜಡ್ಜ್: ನೀನು ಎರಡು ಮದುವೆ ಆದೆಯಂತೆ.
ನಾಣಿ: ಖಂಡಿತಾ ಇಲ್ಲಾ ಸ್ವಾಮಿ.

ಜಡ್ಜ್: ಅದಕ್ಕೆ ಸಾಕಷ್ಟು ಸಾಕ್ಷ್ಯಾಧಾರ ಸಿಕ್ಕಿಲ್ಲ ಅಂತ ನಿನ್ನ ಬಿಡುಗಡೆ ಮಾಡಿದ್ದೇನೆ. ನೀನು ಮನೆಗೆ ಹೋಗಬಹುದು.
ನಾಣಿ: ನಾನೀಗ ಎಲ್ಲಿಗೆ ಹೋಗಲೀ ಸ್ವಾಮಿ, ಮೊದಲನೆ ಹೆಂಡತಿ ಮನೇಗೋ ಎರಡನೇ ಹೆಂಡತಿ ಮನೇಗೋ