ಗುರುಗಳು: ಶಾಲೆಗೆ ಏಕೆ ಲೇಟಾಗಿ ಬಂದೆ?
ಬಾಪೂ: ಶಾಲೆಯ ಹತ್ತಿರ ಇರುವ ರಸ್ತೆಯಲ್ಲಿ “ಶಾಲಾ ವಲಯ, ನಿಧಾನವಾಗಿ ಸಾಗಿರಿ” ಎಂದು ಬೋರ್ಡು ಬರೆದು ಹಚ್ಚಿದ್ದರು. ಅದಕ್ಕೆ ಲೇಟಾಯ್ತು.
ಗಂಡ: ಕಮಲ, ಈ ತಿಂಗಳ ಸಂಬಳ ತಗೋ. ಇನ್ನು ಮೇಲೆ ನೀನು ಹಣ ನೋಡಿಕೊಂಡು ಖರ್ಚು ಮಾಡಬೇಕು ತಿಳೀತಾ?
ಕಮಲ: ಯಾಕೆ?
ಗಂಡ: ಒಂದು ವೇಳೆ ನಾನು ಸತ್ತುಹೋದರೆ ನೀನೆಲ್ಲಿರುತ್ತಿ? ನನಗೂ ವಯಸ್ಸಾಯಿತು.
ಕಮಲ: ನಾನಿಲ್ಲೆ ಇದ್ದೀನಿ. ನೀವೆಲ್ಲಿ ಇರುತ್ತೀರಿ?
ಗುರುಗಳು: ರಾತ್ರಿ ಸೂರ್ಯ ಇರುವುದಿಲ್ಲ ಯಾಕೆ?
ರಾಮು: ಸೂರ್ಯ ಇರುತ್ತಾನೆ. ಆದರೆ ಕತ್ತಲು ಇರುವುದರಿಂದ ಅವನು ಕಾಣುವುದಿಲ್ಲ ಅಷ್ಟೇ.
Saval TV on YouTube