ಭಿಕ್ಷುಕ: ಸ್ವಾಮಿ, ಒಂದು ರೂಪಾಯಿ ಧರ್ಮ ನೀಡಿ.
ನಾಣಿ: ಹೀಗೆ ಬೀದಿ ಬೀದೀಲಿ ಭಿಕ್ಷೆ ಬೇಡೋಕೆ ನಾಚಿಕೆ ಆಗೋದಿಲ್ವೆ?
ಭಿಕ್ಷುಕ: ಇಲ್ಲಾ ನೀವು ಕೊಡೋ ಒಂದು ರೂಪಾಯ್ದೆ ನಾನು ಆಫೀಸು ತೆರೆಸಬೇಕೇನು?
ಬಾಡಿಗೆದಾರ: ನಾನು ಈ ತಿಂಗಳು ಬಾಡಿಗೆ ಕೊಡೋಕ್ಕಾಗಲ್ಲ.
ಓನರ್: ಹೋದ ತಿಂಗಳೂ ಹಾಗೆ ಹೇಳಿದಿರಿ.
ಬಾಡಿಗೆದಾರ: ನಾನು ಮಾತಿನಂತೆ ನಡೆದುಕೊಂಡಿದೀನಲ್ಲ.
ಗುರುಗಳು: ತರಗತಿಯಲ್ಲಿ ಏಕೆ ನಿದ್ದೆ ಮಾಡುತ್ತಿರುವೆ?
ಶೇಖರ: ನೀವೇ ಹೇಳಿದ್ರಲ್ಲಾ ಸರ್, “ನಿದ್ದೆ ಆರೋಗ್ಯಕ್ಕೆ ಒಳ್ಳೆಯದು’ ಅಂತ.
ಲಾಯರ್: ನಿಮಗೆ ಎಷ್ಟು ವರ್ಷ ಮೇಡಂ?
ಸಾಕ್ಷಿ: ನಾನು ಮೂವತ್ತೊಂದು ಚಳಿಗಾಲವನ್ನು ಕಂಡಿದ್ದೇನೆ
ಲಾಯರ್: ಎಷ್ಟು ವರ್ಷ ಕುರುಡರಾಗಿದ್ದೀರಿ?
Saval TV on YouTube