ಸುಬ್ಬಿ: ರೀ ಯಾವ ಸೀರಿಯಲ್ ನೋಡ್ತಾ ಇಷ್ಟೊಂದು ಅಳ್ತಾ ಇದ್ದೀರಿ?
ನಾಣಿ: ನಾನು ನೋಡ್ತಾ ಇರೋದು ಸೀರಿಯಲ್ ಅಲ್ಲಾ. ನಮ್ಮ ಮದುವೆ ಸಿ. ಡಿ.!
ವೈದ್ಯ: ನಿಮಗೆ ಒಂದು ಇಂಜಕ್ಷನ್ ಕೊಡ್ತೀನಿ, ನಿಮಗೇನೂ ನೋವೇ ಆಗೋಲ್ಲ.
ರೋಗಿ: ಅಯ್ಯೋ!
ವೈದ್ಯ: ನಾನಿನ್ನೂ ಚುಚ್ಚಿಯೇ ಇಲ್ಲ ಏನಾಯಿತು?
ರೋಗಿ: ನೀವು ನನ್ನ ಕಾಲ ಮೇಲೆ ನಿಂತಿದೀರಿ!
ಶಿಕ್ಷಕ: ಯಾಕೋ ನಾನು ಪಾಠ ಶುರು ಮಾಡಿದ ತಕ್ಷಣ ಕೈಮುಗೀತೀಯ?
ನಾಣಿ. ಮಲಗೋಕೆ ಮುಂಚೆ ಕೈ ಮುಗೀಬೇಕೂ ಅಂತ ನಮ್ಮ ತಾಯಿ ಹೇಳಿದ್ದಾರೆ ಸಾರ್.
Saval TV on YouTube