ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಯಜಮಾನ: ನಮ್ಮನೆ ನಾಯಿ ತುಂಬಾ ಕೆಟ್ಟದ್ದು.
ಬೀಗರು: ಯಾಕೆ? ಏನು ಮಾಡುತ್ತದೆ?
ಯಜಮಾನ: ಯಾರಾದರೂ ನೆಂಟರು ಬಂದು, ಒಂದು ಗಂಟೆಗಿಂತಲೂ ಹೆಚ್ಚು ಕಾಲ ಮನೆಯಲ್ಲಿ ಉಳಿದರೆ…. ಓಡಿಸಿ ಓಡಿಸಿ ಕಚ್ಚುತ್ತದೆ!

Join Our Whatsapp Group

ನಾಣಿ: ಏನಪ್ಪಾ ನಿಮ್ಮ ಹೋಟೆಲ್ ಊಟ ಚೆನ್ನಾಗಿರುತ್ತಾ?
ಸಪ್ಲೇಯರ್: ಮನೆ ಊಟ ಇದ್ದ ಹಾಗೆ ಇರುತ್ತೆ ಸಾರ್.
ನಾಣಿ: ಮನೆ ಊಟ ಬೇಸರ ಅಂತ ಇಲ್ಲಿಗೆ ಬಂದ್ರೆ ಇಲ್ಲೂ ಅದೇನಾ?

ಮೇಷ್ಟ್ರು: ನೋಡಿ ಮುಂದಿನ ವಾರವೇ ಪರೀಕ್ಷೆ. ಈಗಾಗಲೇ ಕೊಶ್ಚನ್ ಪೇಪರ್ ಪ್ರಿಂಟಿಗೆ ಕೊಟ್ಟಾಯ್ತು. ಇನ್ನೇನಾದರೂ ಅನುಮಾನಗಳಿದ್ದರೆ ಕೇಳಬಹುದು.
ಹುಡುಗರು: (ಒಟ್ಟಿಗೆ) ಸಾರ್, ಪ್ರಿಂಟಿಂಗ್ ಪ್ರೆಸ್ ಹೆಸರು ಹೇಳಿ.