“ಪೇಪರ್ ಓದ್ಯಾ ಶಾಮಣ್ಣಾ?” ಶೀನಣ್ಣ ಕೇಳಿದ. ಸಾರಿಗೆ ಬಸ್ ಉರುಳಿ ಎಂಟು ಹತ್ತು ಜನ ಸತ್ತರಂತೆ ಶಾಮಣ್ಣ “ಹಾಗಾದರೆ ಅದು ಇನ್ನೆಂತಹ ಬಾರಿ ಪಾತ್ರೆಯಪ್ಪಾ ಸಾರು ಮಾಡಿದ್ದು? ಬಸ್ಸು ಮುಳುಗುವಷ್ಟು ಭಾರಿ ಪಾತ್ರೆ ನಾನು ಇವತ್ತೇ ಕೇಳುತ್ತಿರುವುದು ತುಂಬಾ ತಮಾಷೆ ಆಗಿದೆಯಲ್ಲಾ!”
***
ಗಂಡಾಳು ಅಳುತ್ತಾ ಯಜಮಾನರ ಕಡೆಗೆ ಬಂದು “ಸಾಹೇಬರೇ ಅಮ್ಮಾವರು ನನ್ನ ಕೆನ್ನಗೆ ಬಾರಿಸಿಬಿಟ್ಟರು–
ಅಳು ಬರುತ್ತಿದೆ” ಎಂದ. ಸಾಹೇಬರು “ಅದಕ್ಯಾಕೆ ಅಳಬೇಕು ನಾನೆಂದಾದರೂ ಅತ್ತಿದ್ದನ್ನು ನೀನು ಕಂಡಿದ್ದೀಯಾ?”
***
ರಸ್ತೆಯೊಂದರಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗಿತ್ತು. ಜನಸಂದಣಿ ಸೇರಿತ್ತು. ಪತ್ರಿಕೆ ವರದಿಗಾರ ಅಪಘಾತದ ವಿವರ ತಿಳಿಯಲು ಅಲ್ಲಿಗೆ ಬಂದ. ಆದರೆ ಆ ಜನಸಂದಣಿಯಲ್ಲಿ ಕಾರು ಬಳಿಗೆ ಬರಲಾಗಲೇ ಇಲ್ಲ. ಕೂಡಲೇ ಆ ತರುಣ `ದಾರಿ ಬಿಡಿ ದಾರಿ ಬಿಡಿ’ ನನ್ನ ತಂದೆಗೆ ಕಾರು ಆಪಘಾತವಾಗಿದೆ ಎಂದು ಕೂಗಿಕೊಳ್ಳುತ್ತಾ ಜನರಿಂದ ಜಾಗ ಬಿಡಿಸಿಕೊಂಡು ಮುಂದೆ ಹೋದ. ಪೆಟ್ಟು ತಿಂದು ಕಾರಿನ ಮುಂದೆ ಬಿದ್ದು ಕೊಂಡಿದ್ದುದು ಒಂದು ಕತ್ತೆ!
***
ಪಂಡಿತ ಮದನ ಮೋಹನ ಮಾಳವೀಯರದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬಹುದೊಡ್ಡ ಹೆಸರು ಒಂದು ದಿನ ಅವರು ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದಾಗ ತಮ್ಮಭಾರಿ ಮೀಸೆಯನ್ನೂ ಸಹ ಬೋಳಿಸಿಕೊಂಡರು ಹೊರಗಡೆ ಸಂಚಾರ ಹೊರಟಾಗ ಎದುರಾದ ಸ್ನೇಹಿತರೂಬ್ಬರು ಇವರನ್ನು ಕಂಡು “ಇದೇನು ತಮ್ಮಮೀಸೆಯನ್ನೂ ಇಂದು ಬೋಳಿಸಿ ಕೊಂಡಿರುವಿರಲ್ಲಾ ಏಕೆಂದು ಕೇಳಬಹುದೆ? ಅದು ಇದ್ದಿದ್ದರೆ ನಿಮಗೇನು ತೊಂದರೆಯಾಗಿರುತ್ತಿತ್ತು?” ಕೇಳಿದರು ಆ ಮಿತ್ರ. ಅದಕ್ಕೆ ಮಾಳವೀಯರ ಉತ್ತರ ಸಿದ್ದವಾಗಿತ್ತು. “ಇದಕ್ಕೆ ಕಾರಣ ಇಷ್ಟೆ; ನಮ್ಮ ಭರತ ಭೂಮಿಯಲ್ಲಿ ಎಲ್ಲ ಸಹೋದರರು ಪಡಬಾರದ ಕಷ್ಟವನ್ನು ಅನುಭವಿಸುತ್ತಿರುವಾಗ ಅವರಿಗೆ ಯಾವ ಸಹಾಯವನ್ನು ಮಾಡಲಾಗದಿರುವ ಈ ಪುರುಷತ್ವದ ಮೀಸೆ ಏತಕ್ಕಾಗಿ ಬೇಕು? ಅದಕ್ಕಾಗಿ ನಾನು ನನ್ನ ಮೀಸೆಯನ್ನು ಬೋಳಿಸಿದ್ದೇನೆ” ಎಂದರು ಮಾಳವೀಯರು.














