ರೋಗಿ : ನನಗೆ ಬಲಗಾಲಲ್ಲಿ ಬಹಳ ನೋವಿದೆ ಡಾಕ್ಟ್ರೆ.
ವೈದ್ಯ : (ತಪಾಸಣೆ ಮಾಡಿದ ನಂತರ) ಏನು ಯೋಚನೆ ಮಾಡಬೇಕಾಗಿಲ್ಲ ವಯಸ್ಸಾಗಿರುವುದರಿಂದ ಹೀಗೆ ಆಗುತ್ತೆ.
ರೋಗಿ : ಆಶ್ಚರ್ಯವೇ ? ನನಗೆ ತಿಳಿದ ಮಟ್ಟಿಗೆ ನನ್ನ ಎರಡು ಕಾಲಿಗೆ ಒಂದೇ ವಯಸ್ಸಾಗಿದೆಯಲ್ಲಾ?!
*****
ಆತ : ಅಲ್ಲಯ್ಯ ಅವನು ಪೋಲಿಸ್ ಇಲಾಖೆ ಇದ್ಕೊಂಡು ಒಬ್ಬ ಕಳ್ಳನನ್ನು ಹಿಡಿಯದಿದ್ದರೂ ಪ್ರಮೋಷನ್ ಮಾತ್ರ ಸಿಕ್ತಾ ಇದ್ಯಲ್ಲ ಹೇಗೆ ?
ಈತ : ಅವನಿಗೆ ಕಳ್ಳನನ್ನು ಹಿಡಿಯುವ ಬುದ್ಧಿ ಇಲ್ದಿದ್ರೂ ಮೇಲಾಧಿಕಾರಿಗಳ ತಲೆ ಹಿಡಿಯುವ ಬುದ್ದಿ ಬೇಕಾದಷ್ಟಿದೆ ಅದಕ್ಕೆ.














