ಕನ್ನಡ ಟೀಚರ್ ಪುಸ್ತಕದ ಮಹತ್ವ ಕುರಿತು ಮಾತನಾಡುತ್ತಿದ್ದರು ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಪುಸ್ತಕಗಳ ಬಗ್ಗೆ ಹೇಳಿದರು ನಂತರ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಕೇಳಲಾರಂಬಿಸಿದರು…
ಟೀಚರ್ :ನಿಮ್ಮ ಬದುಕಿನ ಮೇಲೆ ಹೆಚ್ಚು ಪ್ರಭಾವ ಬೀರಿ ನಿಮ್ಮ ಜೀವನದ ಉದ್ದಕ್ಕೂ ಸಹಾಯ ಮಾಡಿದ ಪುಸ್ತಕ ಯಾವುದು
ಜಗ್ಗು : ನಮ್ ಅಪ್ಪನ ಚೆಕ್ ಬುಕ್.
*****
ಹೆಂಡತಿ : ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಿ,
ಗಂಡ : ಶಹಜಾನ್ ಮಮ್ತಾಜ್ ಳನ್ನು ಪ್ರೀತಿಸಿದಷ್ಟು
ಹೆಂಡತಿ : ಹಾಗಾದ್ರೆ ನೀವು ನನಗೋಸ್ಕರ ತಾಜಮಹಲ್ ಕಟ್ಟಿಸ್ತೀರಾ ?
ಗಂಡ : ಖಂಡಿತ ನಾನು ಹೀಗೆ ಈಗಾಗಲೇ ಜಾಗ ಖರೀದಿಸಿ ಇಟ್ಟಿದ್ದೇನೆ ಆದರೆ ತಡವಾಗಿರೋದು ನಿನ್ನಿಂದಲೇ
****
ಆಕೆ : ಜೀವನ ನಶ್ವರ ಅಂತ ಗೊತ್ತಿದ್ರೂ ಜನ ಇಷ್ಟೊಂದು ಆಸೆ ಅದೂ, ಇದೂ ಅಂತ ಇಟ್ಕೊಂಡು ಬದುಕೋದು ಏಕೆ ?
ಈಕೆ: ಬದುಕನ್ನು ಅಷ್ಟೇ ,ಗಂಡನ ಹಾಗೆ ಬಿಡಕ್ಕಾಗಲ್ಲ.. ಅವನ ಸುಳ್ಳು ಹೇಳುತ್ತಾನೆ, ಆಗದ ಕುಡೀತಾನೆ, ಅಂತ ಗೊತ್ತಿದ್ದರೂ ಅವನ ಜೊತೆ ಸಂಸಾರ ಮಾಡ್ತೀವಲ್ಲ ಹಾಗೆ
*****
ಆಕೆ : ಡಾಕ್ಟರ್ ನಿನ್ನೆಯಿಂದ ಈ ಬಲಗೈ ತುಂಬಾ ನೋಯ್ತಾಇದೆ.
ಡಾಕ್ಟರು : ಏನಮ್ಮ ಮನೆಯಲ್ಲಿ ಗಲಾಟೆನಾ ಯಜಮಾನ್ರು ತರ್ಲೆ ಮಾಡಿದ್ರಾ ?
ಆಕೆ: ನೀವ್ ಹೇಗ್ ಗೊತ್ತಾಯ್ತು?
ಡಾಕ್ಟರ್ :ಇದೆಲ್ಲ ಮಾಮೂಲು ಅದ್ಸರಿ ನಿನ್ ಗಂಡ ಎಲ್ಲಿ ಈಗ..?
ಆಕೆ : ನರ್ಸಿಂಗ್ ಹೋಂ ಗೆ ಅಡ್ಮಿಟ್ ಆಗಿದ್ದಾರೆ ತಲೆಯಲ್ಲಿ ಬಾಸುಂಡೆ ಬಂದಿದೆ, ಬಲಗೈ ಮೂಳೆ ಮುರಿದಿದೆ.