ʼಸದ್ದುʼ ನ್ಯಾಯಾಧೀಶರ ಗುಡುಗಿದರು. ಇನ್ನು ಯಾರಾದ್ರೂ ಸದ್ದು ಮಾಡಿದರೆ ಕೋರ್ಟ್ ನಿಂದ ಹೊರಗಡೆ ಹಾಕಲಾಗುತ್ತದೆ ಎಂದರು.
ಕೂಡಲೇ “ಹುರೇ” ಎಂದು ವಿಚಾರಣೆಗಿದ್ದ ಕೈದಿ ಅರಚಿಕೊಂಡ.
****
ಪೊಲೀಸ್ : ಸಿದ್ದಾರ್ಥ್ ಅವರ ಮನೆ ಮುಂಭಾಗಲು ಒಡೆದು ಒಳಗೆ ನುಗ್ಗಿ ಕಳ್ಳತನ ಮಾಡಿದ್ಯಲ್ಲ ಯಾಕೆ ?
ಕಳ್ಳ : ಎಂತ ಜನ ಸಾರ್ ಅವರು, ಮನೆಗೆ ಡೋರ್ ಲಾಕ್ ಹಾಕಿದ್ರು ನನ್ನತ್ರ ಇರೋ ಕೀ ಯಿಂದ ಅವೆರಡು ಓಪನ್ ಆಗಲೇ ಇಲ್ಲ ಅದಕ್ಕೆ ಬಾಗಿಲು ಹೊಡೆದೆ.
****
ಪದವೀಧರನೊಬ್ಬ ವಯಸ್ಸಾದ ಹಳ್ಳಿ ರೈತನನ್ನು ಮಾತನಾಡಿಸುತ್ತಾ “ಅಜ್ಜ ನಮ್ಮ ವ್ಯವಸಾಯ ಪದ್ಧತಿ ಈಗಿನ ಕಾಲಕ್ಕೆ ಏನೇನು ಸರಿಯಲ್ಲ ಆ ಮರದಲ್ಲಿ 10 ಕೆಜಿ ಮಾವಿನಹಣ್ಣು ಏನಾದ್ರೂ ಸಿಕ್ಕರೆ ನನಗಂತೂ ಖಂಡಿತ ಐಶ್ವರ್ಯ” ಎಂದ ಅಜ್ಜ ಹೇಳಿದ “ನನಗೂ ಅಷ್ಟೇ ಏಕೆಂದರೆ ಅದು ನೇರಳೆ ಮರ….!”
****
“ಸರ್ ಕಳೆದ ದೀಪಾವಳಿಗೆ ಕಳಿಸಿದ್ದ ಕವನ ವಾಪಸ್ ಬಂದಿದ್ದು ಈ ಸಲ ಮತ್ತೆ ತಂದಿದ್ದೀನಿ” ಎಂದು ನವಕವಿ.
ಸಂಪಾದಕರ ಮುಂದೆ ನಿಂತು ಕೈಜೋಡಿಸಿದ “ಹೋದ ವರ್ಷನೆ ಬೇಡ ಅಂದಿದ್ದೆ ಈ ಒಂದು ವರ್ಷದ ಸಾಹಿತ್ಯ ಪರಿಶೀಲಿಸಿದ ಮೇಲೆ ತಾವು ಇದನ್ನು ಇಷ್ಟಪಡುತ್ತೀರಾ ಅಂತ ನಂಗೊತ್ತು ಸರ್” ಕವಿ ವಿಶ್ವಾಸದಿಂದ ಹೇಳಿದ.