ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸತೀಶ : ಮೇಡಂ… ನಾವು ನೀವು ಮದುವೆಯಾದರೆ ಅದೊಂದು ವಂಡರ ಫುಲ್ ಪೇರ್ ಆಗುತ್ತಲ್ಲ.

ಮೇಡಂ : ಬರೀ ಪೇರ್ ಅಲ್ಲದೆ ನಮ್ಮ ಪೇರೇ (ಹೆಸರು) ಇಲ್ಲದ ಹಾಗೆ ಬದುಕು ಏರುಪೇರಾಗಿ ಬಿಡುತ್ತದೆ.

****

ʼರವಿ ಕಾಣದ್ದು, ಕವಿ ಕಂಡʼ ಎಂಬ ಮಾತು ಸರಿಯಿದೆ. ಏಕೆಂದರೆ ರವಿ ಹಗಲಿನಲ್ಲಿ ಮಾತ್ರ ಕಾಣುವುದು ಕವಿ ರಾತ್ರಿಯೂ ಸುತ್ತುತ್ತಾ ಎಲ್ಲವನ್ನು ಕಾಣಬಹುದು. ರವಿ ರಾತ್ರಿಯಲ್ಲಿ ಇರುವುದಿಲ್ಲವಲ್ಲಾ….

ಮಗ: ಅಪ್ಪ ಗುಡ್ ನ್ಯೂಸ್.

ಜಗ್ಗು : ಏನು ಹೇಳೋ… 

ಮಗ : ನಾನು ಇಂಜಿನಿಯರಿಂಗ್ ಪಾಸ್ ಆದ್ರೆ ಬೈಕ್ ಕೊಡಿಸ್ತೀನಿ ಅಂತ ಹೇಳಿದ್ಯಲ್ಲ.

ಜಗ್ಗು : ಹೌದು, ಏನಾಯ್ತು?

ಮಗ : ಡೋಂಟ್ ವರಿ ಅಪ್ಪ ನಿನ್ನ ದುಡ್ಡು ಉಳಿತು.

***

ನ್ಯಾಯಾಧೀಶರು ಕಳ್ಳನನ್ನು ಬಿಡುಗಡೆ ಮಾಡುತ್ತಾ ಹೇಳಿದರು

“ಇದು ನಾಲ್ಕನೇ ಸಲ ನೀನು ನನ್ನ ಮುಂದೆ ಬಂದು ಕೈಕಟ್ಟಿ ನಿಲ್ಲುವುದು ಇದೆ ಕಡೆ ಸಲ ತಿಳೀತಾ ?”

“ಯಾಕೆ ಸರ್ ? ತಾವು ನಿವೃತ್ತಿ ಆಗ್ತಾ ಇದ್ದೀರಾ?” ಕಳ್ಳ ಅನುಕಂಪದಿಂದ ಕೇಳಿದ.

ಹಿಂದಿನ ಲೇಖನಉಡ್ಡಿಯಾನ ಬಂಧ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ