ಜಗ್ಗು : ಏನಾಯ್ತು ರಿಸಲ್ಟ್ !?
ಮಗ : 5 ಸಬ್ಜೆಕ್ಟ್ ನಲ್ಲಿ ಫೇಲು ಅಪ್ಪ..
ಜಗ್ಗು : ಇನ್ನು ನೀನು ನನ್ನ ಅಪ್ಪ ಅಂತ ಕರಿಬೇಡ.
ಮಗ : ಸರಿ ಕಣೋ ಐದು ಸಬ್ಜೆಟ್ಟಿನಲ್ಲಿ ಹೋಯ್ತು ಕಣ್ಲೇ……..
***
ರಂಗಣ್ಣ : ಡಾಕ್ಟರ್, ಈ ಕಾಯಿಲೆ ನನಗೊಂದು ಸಮಸ್ಯೆ ಆಗಿ ಹೋಗಿದೆ.
ಡಾಕ್ಟರ್ : ಏನು ನಿನ್ನ ಕಾಯಿಲೆ?
ರಂಗಣ್ಣ : ಮರೆವು ಡಾಕ್ಟರೇ, ಎಲ್ಲ ಮರೆತು ಹೋಗುತ್ತೇ. ಅದೇ ದೊಡ್ಡ ಸಮಸ್ಯೆ.
ಡಾಕ್ಟರ್ : ಈ ಸಮಸ್ಯೆ ಯಾವಾಗಿನಿಂದ ?
ರಂಗಣ್ಣ: ಯಾವ ಸಮಾಸ್ಯೆ ಡಾಕ್ಟರ್
***
ಮ್ಯಾಜಿಸ್ಟ್ರೇಟ್ : ಈ ಆಫೀಸರ್ ಹೇಳಿದ್ರು ನಿಮಗೂ ನಿಮ್ಮ ಹೆಂಡತಿ ನಡುವೆ ಜೋರು ಜೋರಾಗಿ ಮಾತುಕತೆಯಾಯಿತಂತೆ. ಏನ್ ಹೇಳ್ತೀರಾ ?
ಆರೋಪಿ : ಮಾತುಕತೆ ಆದದ್ದೇನು ನಿಜ ಸರ್, ಆದರೆ ಮಾತೆಲ್ಲ ಅವಳದೇ.
***
ಲತಾ : ವಯಸ್ಸಾದ ಮೇಲೆ ನಿಮ್ಮತ್ತೆ ಹೊಟ್ಟೆಗೆ ತಿನ್ನೋದು ಕಡಿಮೆ ಮಾಡಿದ್ದಾರೆ ಅಂತೆ,
ಗೌರಿ : ಹೌದು ಹೊಟ್ಟೆಗೆ ತಿನ್ನೋದು ಕಡಿಮೆ ಮಾಡಿದ್ದಾರೆ. ಆದರೆ, ಸಿಕ್ಕ ಸಿಕ್ಕವರ ತಲೆ ತಿನ್ನೋದು ಹೆಚ್ಚು ಮಾಡಿದ್ದಾರೆ.














