ಶೀಲಾ : ಏನ್ರೀ ಕನಕಮ್ಮ, ನಿಮ್ಮ ಮಗ ಹೇಗೆ ಇಷ್ಟು ಬುದ್ಧಿವಂತ ಆದ ?
ಕನಕಮ್ಮ : ತುಂಬಾ ಸಿಂಪಲ್ ರೀ, ಅವನಿಗೆ ಬೈಬೇಕಾದಾಗೆಲ್ಲಾ ಅವರಪ್ಪನಿಗೆ ಬೈತಿದ್ದೆ, ಬೇಗ ಬುದ್ಧಿ ಕಲಿತುಕೊಂಡ.
***
ಅವಳು : ನಿಮ್ಮ ಮನೆಗೆ ಸಂಗೀತ ಮೇಷ್ಟು ಬಂದು ನಿನಗೆ ಸಂಗೀತ ಕಲಿಸುತ್ತಾರಂತಲ್ಲ! ಏನೇನು ತಿಳಿದುಕೊಂಡೆ?
ಇವಳು : ನಮ್ಮ ಸಂಗೀತ ಮೇಷ್ಟ್ರರರ ಕಂಠ ತುಂಬಾ ಚೆನ್ನಾಗಿದೆ. ಅವರಿಗೆ 25 ವರ್ಷವಂತೆ, ಇನ್ನೂ ಮದುವೆಯಾಗಿಲ್ಲವಂತೆ, ತಿಂಗಳಿಗೆ ತುಂಬಾ ಸಂಪಾದನೆ ಇದೆಯಂತೆ, ತಂದೆ ತಾಯಿ ಯಾರು ಇಲ್ಲ ಅಂತೆ.
***
ಭಯಂಕರ ಸೆಕೆ ಆ ರಾತ್ರಿ ಕರೆಂಟು ಪಕ್ಕನೆ ಹೋಯಿತು…
ಸೆಕೆ ತಾಳಲಾರದೆ ಜಗ್ಗು ಹೆಂಡತಿ ಕೂಗಿ ಫ್ಯಾನ್ ಹಾಕಲು ತಿಳಿಸಿದ ಜಗ್ಗುವಿಗೆ ಬುದ್ಧಿವಂತ ಹೆಂಡತಿ ಗಂಡನ ದಡ್ಡತನಕ್ಕೆ ರೇಗುತ್ತಾ ಹೇಳಿದಳು
“ಅಯ್ಯೋ! ನಿಮ್ಮ ಬುದ್ಧಿಗೆ ಬೆಂಕಿ ಹಾಕಾ…. ಫ್ಯಾನ್ ಹಾಕಿದರೆ ದೀಪ ಹಾರಿ ಹೋಗಲ್ವೇನ್ರೀ….!?”
***
ರಾಜು : ಗಂಡ ಹೇಳಿದ ಜೋಕ್ ಗಳನ್ನು ಕೇಳಿ ಹೆಂಡತಿ ನಗುವುದು ಯಾಕೆ ಗೊತ್ತಾ ?
ರಮೇಶ್ : ಇನ್ನು ಯಾಕೆ, ಬುದ್ಧಿವಂತ ಜೋಕ್ ಹೇಳಿದವನಲ್ಲ ಅಂತ ಸಂತೋಷದಿಂದ.
ರಾಜು : ಅಲ್ಲ.
ರಮೇಶ್ : ಮತ್ತೆ ?
ರಾಜು : ಗಂಡ ಹೇಳುವ ಕೆಟ್ಟ ಜೋಕುಗಳಲ್ಲಿ ನಗು ಕಂಡುಹಿಡಿಯಬಲ್ಲ ಬುದ್ಧಿವಂತೆ ತಾನು ಅಂತ.