Saval TV on YouTube
ವ್ಯಾಕರಣ ಪಂಡಿತರ ಆಯುಷ್ಯ ಮುಗಿದಿತ್ತು.
ಸ್ವತಃ ಯಮನೇ ಬಂದು ಪ್ರಾಣ ಒಯ್ಯಲು ಸಿದ್ಧನಾದ.
ಪಂಡಿತರೆ ನಿಮ್ಮ ಆಯುಷ್ಯ ಮುಗಿದಿದೆ. ನಿಮ್ಮ ಪ್ರಾಣ ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದ.
ಪಂಡಿತರು ಯಾವ ಪ್ರಾಣ, ಮಹಾಪ್ರಾಣವೋ ಇಲ್ಲ ಅಲ್ಪ ಪ್ರಾಣವೋ ಎಂದರು.
ಯಮ ಹೇಳಿದ ನಿಮ್ಮ ಪಂಚ ಪ್ರಾಣ.ಪಂಡಿತರು ಹೇಳಿದರು.
ಹೌದೆ ನನ್ನ ಪಂಚಪ್ರಾಣವೇ. ಇಲ್ಲೇ ಪಕ್ಕದಲ್ಲಿ ನಿಂತಿದ್ದಾಳೆ, ಮಡದಿ ಕರೆದುಕೊಂಡು ಹೋಗು….














