ಮನೆ ಹಾಸ್ಯ ನಕ್ಕು ನಲಿಯಿರಿ

ನಕ್ಕು ನಲಿಯಿರಿ

0

ಕಂಡುಹಿಡಿಯಬೇಕು..!

ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು.

ಗುಂಡಾ: ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸಾರ್ ಎಂದ.

**************

ನಂಬರ್ ಪತ್ತೆ ಹಚ್ಚಬೇಕು

ಗುಂಡಾ ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ?

ಕಾರಿನ ನಂಬರನ್ನು ಗುರ್ತು ಮಾಡ್ಕೊಳ್ಳಬೇಕು..!

**************

ಆತ್ಮಹತ್ಯೆ

ಕಪ್ಪೆ: ನೀನು ಮೋಸಗಾರ

ಹಾವು: ಸುಳ್ಳು ಹೇಳಬೇಡ

ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು..

ಹಾವು: ದೇವರೇ., ಇಷ್ಟಕ್ಕೆಲ್ಲ ಯಾರದರೂ ಆತ್ಮಹತ್ಯೆ ಮಾಡ್ಕೊತಾರಾ?