ಮನೆ ಹಾಸ್ಯ ಜೋಕು ಜೋಕಾಲಿ

ಜೋಕು ಜೋಕಾಲಿ

0

ಆಸೆ

ಮಂತ್ರಿಯೊಬ್ಬ ಟಿವಿ, ಸಂದರ್ಶನದಲ್ಲಿ ಹೇಳಿದ –

ನಾನು ಚಿಕ್ಕವನಾಗಿದ್ದಾಗ ದೊಡ್ಡ ದರೋಡೆಕೋರನಾಗಬೇಕೆಂದು ಆಸೆ ಪಟ್ಟಿದ್ದೆ…”

ಅದಕ್ಕೆ ಸಂದರ್ಶಕ ಹೇಳಿದ –

“ಅಂತೂ ನಿಮ್ಮ ಆಸೆ ನೆರವೇರಿತಲ್ಲಾ…”

*****

ಚರಿತ್ರೆ

ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು.

“ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ…”

ನಂಗೇನು ಚರಿತ್ರೆಗೊತ್ತಿಲ್ವಾ… ಭೂಮಿ ಗುಂಡಾಗಿದೆ. ಅವನು ನನ್ನ ಕೈಗೆ ಸಿಗದೇ ಎಲ್ಲಿ ಹೋಗ್ತಾನೆ…”

*****

ಸುಳ್ಳು

ಪಾಪು: “ಅಪ್ಪ, ಅಮ್ಮ ತುಂಬಾ ಸುಳ್ಳು ಹೇಳ್ತಾಳೆ?”

ಅಪ್ಪು: “ಹೌದು ಏನಾಯ್ತು…”

ಪಾಪು: “ಕನ್ನಡಿ ಮುಟ್ಟು ಬೇಡ ಬಿದ್ದರೆ ಎರಡು ಚೂರಾಗುತ್ತೆ ಅಂದ್ಲು ಇಲ್ಲಿ ನೋಡು ಎಷ್ಟು ಚೂರು ಚೂರಾಗಿದೆ ಅಂತ..”

*****