Saval TV on YouTube
ಒಟ್ಟಿಗೆ
ಗುಂಡ: “ನನಗೆ ಹತ್ತು ಜನ ಒಟ್ಟಿಗೆ ಹೊಡಿಯೋಕೆ ಬಂದ್ರು.”
ಪುಟ್ಟ: “ಹೌದಾ; ಆಮೇಲೆ”
ಗುಂಡ: “ತಾಕತ್ ಇದ್ರೆ ಒಬ್ಬರೆ ಬನ್ನಿ ಅಂದೆ” .
ಪುಟ್ಟ: “ಆಮೇಲೆ”
ಗುಂಡ: “ಒಬ್ಬೊಬ್ರೆ ಬಂದು ಹೊಡೆದ್ರು…”
*****
ಯಾರು?
ಸರ್ದಾರ್: “ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ…”
ವ್ಯಕ್ತಿ: “ಅವಳು ನನ್ನ ಮಗಳು..”
ಸರ್ದಾರ್: “ನೀವು ಅವರ ತಂದೆಯಾ?”
ವ್ಯಕ್ತಿ: “ಅಲ್ಲ ತಾಯಿ”
*****
ದೂರ
ಸರ್ದಾರ ವಿಮಾನ ನಿಲ್ದಾಣದಲ್ಲಿ ವಿಚಾರಿಸಿದ –
“ಅಮೇರಿಕಾ ಎಷ್ಟು ತಾಸು ಪ್ರಯಾಣ”.
ರಿಸೆಪ್ಷನಿಸ್ಟ್ ಹೇಳಿದಳು “ಒಂದು ತಾಸು”
ಸರ್ದಾರ ಹೇಳಿದ- “ಹಾಗಾದ್ರೆ ನಾನು ನಡೆದೇ ಹೋಗ್ತೀನಿ ಬಿಡಿ”
*****














