ಮನೆ ಹಾಸ್ಯ ನಗೆ ಹನಿ

ನಗೆ ಹನಿ

0

ನಿಮಗ್ಯಾಕೆ

ಮಾಲಾ: “ನನ್ನ ಮಗನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್ ಡಾಕ್ಟ್ರೆ…”

ಡಾ.ಗುರು: “ನಾನಲ್ಲ ಉಳಿಸಿದ್ದು ದೇವರು..”

ಮಾಲಾ: “ಸರಿ ಬರ್‍ತಿವಿ ಡಾಕ್ಟ್ರೆ..”

ಡಾ.ಗುರು: “ನನ್ನ ಫೀಸು ಕೊಟ್ಟಿಲ್ಲ….”

ಮಾಲಾ: “ಅದನ್ನು ಆ ದೇವರಿಗೆ ಕೊಡ್ತಿವಿ ಬಿಡಿ”

*****

ನಿಜ ಹೇಳಲಾ

ಗುಂಡನಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಮೂರು ಮಕ್ಕಳು ತೆಳ್ಳಗೆ ಬೆಳ್ಳಗ್ಗಿದ್ದರೆ ನಾಲ್ಕನೇ ಮಗ ಕುಳ್ಳಗೆ ಕಪ್ಪಗಿತ್ತು.

ಗುಂಡ ಕೇಳಿದ – “ನಿಜ ಹೇಳೆ, ನಾಲ್ಕನೇ ಮಗ ನಿಜವಾಗ್ಲೂ ನನ್ನವನೆ?

ಹೆಂಡ್ತಿ ಹೇಳಿದ್ಲು – “ನೀವು ಸಿಟ್ಟಾಗದಿದ್ರೆ ಹೇಳ್ತಿನಿ..”

ಗುಂಡ: “ಹೇಳು ಪರವಾಗಿಲ್ಲ…”

ಹೆಂಡ್ತಿ: “ಅವನೊಬ್ಬನೇ ನಿಮ್ಮ ಮಗ..”

*****

ಯಾಕೆ?

ಅಪ್ಪ: “ಯಾಕೆ ಗುಂಡ ನಿನ್ನಮ್ಮ ಇವತ್ತು ಸುಮ್ಮನೆ ಕುಳಿತಿದ್ದಾರೆ..”

ಗುಂಡ: “ಅಮ್ಮ ಮರೆತು ಲಿಪ್ಟಿಕ್ ಬದಲು ಫೆವಿಕ್ಕಿಕ್ ಹಚ್ಚಿಕೊಂಡಿದ್ದಾರೆ..”