ಹೇಗೆ
ತಿಮ್ಮ: ಈ ಬಾರಿ ನನ್ನ ಪರ್ಸಿನಿಂದ ಹಣ ತೆಗೆದಿರುವುದು ನನ್ನ ಹೆಂಡ್ತಿಯಲ್ಲ
ಬೊಮ್ಮ: ಅದು ಹ್ಯಾಗೆ ಹೇಳುತ್ತಿ…
ತಿಮ್ಮ: ಇನ್ನೂ ಸ್ವಲ್ಪ ಚಿಲ್ಲರೆ ಉಳಿದಿದೆ
*****
ಹಿಂದಿತ್ತು
ಇಪ್ಪತ್ತು ಮಹಡಿ ಕಟ್ಟಡ ಕೆಳಗಿನಿಂದ ಗುಂಡ ಮೇಲೆ ನೋಡುತ್ತಾ ನಿಂತಿದ್ದ. ಹಾದಿ ಹೋಕರ್ಯಾರೋ ಕೇಳಿದ್ರು –
“ಏನು ನೋಡುತ್ತಿರುವೆ?”
“ಮೇಲಿಂದ ನನ್ನ ವಾಚು ಕೆಳಗೆ ಬಿತ್ತು..”
“ಅದು ಇಲ್ಲೆಲ್ಲೋ ಬಿದ್ದಿರುತ್ತೆ ಹುಡುಕು”
ಅದಕ್ಕೆ ಗುಂಡ ಹೇಳಿದ – “ಅದು ಹದಿನೈದು ನಿಮಿಷ ಹಿಂದಿತ್ತು…”
*****
ಬೊಗಳೆ
ಗುಂಡ: ತನ್ನ ಗೆಳೆಯರಿಗೆ ಹೇಳಿದ – ತಿಂಗಳ ಕೆಳಗೆ ಬಾವಿಗೆ ಬಿದ್ದ ನಮ್ಮಣ್ಣನ ವಾಚು ನಿನ್ನೆ ಸಿಕ್ಕಿತು
ತಿಮ್ಮ: ಅದರಲ್ಲೇನು ವಿಶೇಷ…
ಗುಂಡ: ವಿಶೇಷ ವಿರುವುದು ಅಲ್ಲೇ… ಆ ವಾಚು ಇನ್ನೂ ನಡೆಯುತ್ತಲೇ ಇತ್ತು…
ತಿಮ್ಮ: ಅದೇ ಬಾವಿಗೆ ಬಿದ್ದ ನನ್ನ ತಮ್ಮ ನಿನ್ನೆ ತಾನೇ ಎದ್ದು ಬಂದನು…
ಗುಂಡ: ಅವನು ಅಲ್ಲೇನು ಮಾಡುತ್ತಿದ್ದ…
ತಿಮ್ಮ: ನಿನ್ನಣ್ಣನ ವಾಚಿಗೆ ಕೀ ಕೊಡುತ್ತಿದ್ದನು…
Saval TV on YouTube