ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾಯಿ

ತಿಮ್ಮ ತನ್ನ ನಾಯಿ ಜೊತೆ ವಾಕಿಂಗ್ ಹೊರಟಿದ್ದ – ಅವನ ಗೆಳೆಯ ಸಿಕ್ಕವನು ಕೇಳಿದ –

 “ಏನು ಕತ್ತೆಯ ಜೊತೆಯಲ್ಲಿ ವಾಕಿಂಗ್ ಹೊರಟಿರುವೆ…” ಅದಕ್ಕೆ ತಿಮ್ಮ ಕೇಳಿದ –

 “ಏನೋ ಇದು ನಾಯಿ ಅಲ್ವಾ?”

ಅದಕ್ಕಾತ ಹೇಳಿದ – “ನಾನು ಕೇಳಿದ್ದು ನಿಮ್ಮನ್ನಲ್ಲ, ನಾಯಿಯನ್ನು…”

*****

ದಳ

ವಿಜ್ಞಾನದ ಮೇಷ್ಟ್ರ “ದಳದಲ್ಲಿ ಎಷ್ಟು ವಿಧ” ಅಂದರು

ಆಗ ತಿಮ್ಮ ಹೇಳಿದ – “ಶರತ್‌ ಯಾದವ್ ದಳ, ದೇವೇಗೌಡರ ದಳ ಮತ್ತು ಲಾಲುಪ್ರಸಾದ್ ದಳ ಅಂದನು..”

*****

ಕಳವು

ಶೀಲಾ :- “ರಿ ನಮ್ಮ ಮನೆ ಕೆಲಸದಾಕೆ ನಮ್ಮ ಸ್ಟೀಲ್ ತಟ್ಟೆಯನ್ನೇ ಕದ್ದಿದ್ದಾಳೆ”

ಮಂಜು :- “ಯಾವ ತಟ್ಟೆಯೋ…?”

ಶೀಲಾ :- “ಅದೇ ರೀ ನಾವು ಉಡುಪರ ಮನೆಯಿಂದ ತಂದಿದ್ದು…”

ಹಿಂದಿನ ಲೇಖನವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಓದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು: ಆರ್. ರಘುನಂದನ್
ಮುಂದಿನ ಲೇಖನರಾಷ್ಟ್ರೀಯ ಆರಕ್ಷಕ್ ಮಂಚ್ ಹೊಸ ಪಕ್ಷ ಸ್ಥಾಪನೆ: ಗೋಪಾಲಕೃಷ್ಣ ನಾಯಕ್