ತಪ್ಪು
ಮೇಷ್ಟ್ರು : “ಭಾರತದ ರಾಜಧಾನಿ ಯಾವುದು?”
ಶೀಲಾ : “ಬೆಂಗಳೂರು”
ಮೇಷ್ಟ್ರು : “ತಪ್ಪು ಉತ್ತರ ಕೊಡ್ತಿದ್ದಿ.”
ಶೀಲಾ : “ಇಲ್ಲ ಸಾರ್ ನೀವು ತಪ್ಪು ಪ್ರಶ್ನೆ ಕೇಳಿದ್ರಿ… ಕರ್ನಾಟಕದ ರಾಜಧಾನಿ ಕೇಳಬೇಕಾಗಿತ್ತು.”
*****
ನಾನು ಅದನ್ನೆ ಮಾಡಿದೆ
ಗುಂಡ ಮಹಾ ಜಿಪುಣ, ಅವನಿಗೆ ಒಮ್ಮೆ ಕೀರು ಕುಡಿಯುವ ಆಸೆಯಾಯಿತು. ಹೋಟೆಲ್ ಗೆ ಹೋದ. ಕೀರು ಆರ್‍ಡ ರ್ ಮಾಡಬೇಕೆನ್ನುವಾಗ ಅವನ ಎದುರು ಕುಳಿತವನು ಪೇಪರ್ ಓದುತ್ತಿದ್ದ. ಅವನ ಮುಂದೆ ಕೀರು ಇತ್ತು. ಗುಂಡ ಅವನಿಗೆ ತಿಳಿಯದಂತೆ ಕೀರು ಖಾಲಿ ಮಾಡಿದ. ಲೋಟದ ತಳದಲ್ಲಿ ಜಿರಲೆ ಇತ್ತು. ಗುಂಡನಿಗೆ ಜಿರಲೆ ತಿಂದರೆ ಅಲರ್ಜಿ ಕುಡಿದಿದ್ದು ಪೂರ್ತಿ ಹಾಗೆ ಲೋಟಕ್ಕೆ ವಾಂತಿ ಮಾಡಿದ, ಆಗ ಎದುರಿನಲ್ಲಿ ಕುಳಿತವನು ಹೇಳಿದ.
“ನಾನು ಹೀಗೆ ಮಾಡಿದ್ದೆ.”
*****
ತಪ್ಪು
ಮಂಜು :- “ನನ್ನ ಹೆಂಡ್ತಿಗೆ ಮನೇಲಿ ಸಕ್ಕರೆ ಇದೆಯಲ್ಲಾ ಟೀಗೆ ಸಕ್ಕರೆ ಜಾಸ್ತಿ ಹಾಕು ಎಂದಿದ್ದೆ ತಪ್ಪಾಯ್ತು…”
ರಾಘು :- “ಯಾಕೋ…”
ಮಂಜು :- “ಮನೆಲೀ ಉಪ್ಪು ಜಾಸ್ತಿ ಇದೆಯೆಂದು ಸಾರಿಗೆ….”