ಶ್ರದ್ಧೆ
ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ ಹೇಳಿದಾಗ ಆಕೆ ಹೇಳಿದಳು.
“ಇಂಥಹ ಕಲಾಕಾರ ಬೇಕಾದರೆ ಸಿಗಬಹುದು ಆದರೆ ಅಷ್ಟು ನಿಯತ್ತಿನ ಕೆಲಸದವರು ಸಿಗುವುದು ಕಷ್ಟ.”
*****
ಯಾವುದು?
ಶೀಲಾ : “ಸಾರಾಯಿ, ಮತ್ತು ನೀರು ಇದರಲ್ಲಿ ಯಾವುದು ಅಪಾಯಕಾರಿ”
ಗುಂಡ : “ನೀರು”
ಶೀಲಾ : “ಅದು ಹ್ಯಾಗೆ?”
ಗುಂಡ : “ಪ್ರವಾಹ ಬಂದರೆ ಸಾವಿರಾರು ಜನ ಸಾಯುತ್ತಾರೆ, ಆದರೆ ಈ ಸಾರಾಯಿಯಿಂದ ಎಲ್ಲಿ ಅಷ್ಟೊಂದು ಜನ ಸಾಯುತ್ತಾರೆ?”
*****
ಒಂದು ಕೊಡಿ
ಪಾಪು : “ಶಟ್ರೆ ಬಟ್ಟೆ ಸೋಪು ಕೊಡಿ”
ಶೆಟ್ರು : “೫೦೧ ಕೊಡ್ಲಾ”
ಪಾಪು : “ಅಷ್ಟೆಲ್ಲಾ ಬೇಡ ಒಂದು ಸಾಕು”