ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪೊಲೀಸ್ : ಯಾಕಯ್ಯ ಯಾವಾಗಲೂ ಅದೇ ಮನೆಗೆ ಹೋಗಿ ಕಳ್ಳತನ ಮಾಡಿ ಸಿಕ್ಕಿಬೀಳ್ತಿಯ.   

ಕಳ್ಳ : ಸಾರ್ , ಫ್ಯಾಮಿಲಿ ಡಾಕ್ಟಾರ್ , ಫ್ಯಾಮಿಲಿ ಲಾಯರ್ ತರ ನಾನು ಅವರ ಫ್ಯಾಮಿಲಿ ಕಳ್ಳ.

********************   

Join Our Whatsapp Group

ಪೊಲೀಸ್ : ಹೇ ಏನಯ್ಯ ರಾತ್ರಿ 12 ಘಂಟೆ ಆದರು ಓಡಾಡ್ತಾ ಇದ್ದಿಯಾ , ಏನು ಏರೋಪ್ಲೇನ್ ಹತ್ತಿಸಬೇಕಾ ..   

ದಾರಿಹೋಕ : ಅಯ್ಯೋ ಬೇಡ ಸಾರ್ , ನಿಮಗೇಕೆ ಅಷ್ಟು ಶ್ರಮ , ಏರೋಪ್ಲೇನ್ ಬೇಡ ಯಾವುದಾದರೂ ಆಟೋ ಹತ್ತಿಸಿ ಸಾಕು.

********************   

ಹುಡುಗ : ನಿನಗೆ ಎಷ್ಟು ಮಾರ್ಕ್ಸ್ ಬಂದಿದೆ….   

ಹುಡುಗಿ : 99% ಬಂದಿದೆ… ಪಸ್ಟ್ ಕ್ಲಾಸ್ 

ಹುಡುಗ : ಅಬ್ಬಾ , ಇದರಲ್ಲಿ ನನ್ನಂತಹ 3 ಜನ ಹುಡುಗರು ಜಸ್ಟ್ ಪಾಸ್ ಆಗಬಹುದುತ್ತು.  

*******************  

ಹುಡುಗಿ : ನೀನು ನನ್ನ ಎಷ್ಟು ಪ್ರೀತಿ ಮಾಡುತ್ತೀಯಾ . . .  

ಹುಡುಗ : ಅದು ಹೇಳಲು ಸಾಧ್ಯವಿಲ್ಲ , ಷಾಜಹಾನ್ ಅಷ್ಟು ಪ್ರೀತಿಸ್ತಿನಿ..  

ಹುಡುಗಿ : ಆಗಾದ್ರೆ ತಾಜ್ ಮಹಲ್ ಯಾವಾಗ ಕಟ್ಟಿಸ್ತೀಯಾ ?

ಹುಡುಗ : ಲ್ಯಾನ್ಡ್ ರೆಡಿಯಿದೆ , ಆದರೆ ನಿನ್ನ ಸೇವಿಗೆ  ಕಾಯ್ತಾ ಇದ್ದೀನಿ . . .   

******************   

ಮಂತ್ರಿ : ಪ್ರಭು , ಯುದ್ಧಕ್ಕೆ ಈ ಕೂಡಲೇ ರೆಡಿಯಾಗಿ ಅಂತ ಪಕ್ಕದ ರಾಜ್ಯದ ರಾಜ ಮೆಸೇಜ್ ಕಳಿಸಿದ್ದಾನೆ , ಈಗ ಏನ್ ಮಾಡೋದು ಪ್ರಭು.   

ರಾಜ : ಹೌದೇ , ಆಗಾದರೆ , ಮೆಸೇಜ್ , ಸೆಂಡಿಂಗ್ ಫೇಲ್ ಅಂತ ಮೆಸ್ಸೇಜ್ ಕಳುಹಿಸು. 

 *******************  

ಮಗ : ಅಪ್ಪಾ , ನಾನು ಗಾಂಧೀಜಿ ತರ ಆಗಬೇಕು ಅಂತ ಇದ್ದೀನಿ . . .   

ತಂದೆ : ವೆರಿ ಗುಡ್ , ಆಗು . .   

ಮಗ : ಆಗಾದರೆ ಗಾಂಧೀಜಿ 12 ನೇ ವರ್ಷಕ್ಕೆ ಮದುವೆ ಆದ್ರಂತೆ , ನನಗೂ ಮಾಡಿಸಪ್ಪಾ . .

******************

ಸೇಲ್ಸ್ ಮೆನ್ : ಸಾರ್ , ನಿಮಗೆ ಪೌಡರ್ ಕೊಡಲಾ….  

ಗುಂಡ : ಇದು ಯಾವುದಕ್ಕೆ ,  

ಸೇಲ್ಸ್ ಮೆನ್ : ಇದು ಇಲಿಗಳಿಗೆ ಉಪಯೋಗಿಸೋ ಪೌಡರ್ . . .   

ಗುಂಡ : ಬೇಡ ಬೇಡ , ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ ಸ್ಟಿಕ್ ಕೇಳ್ತಾವೆ .