ಸೈಡ್ ಎಫೆಕ್ಟ್
ತಿಮ್ಮನಿಗೆ ನೆಗಡಿಯಾಗಿತ್ತು. ಡಾಕ್ಟ್ರು ಮಾತ್ರೆ ಕೊಟ್ಟರು. ತಿಮ್ಮ ಮನೆಗೆ ಬಂದು ಮಾತ್ರೆಯ ಲೇಬಲ್‌ನ ಸುತ್ತಲು ಕತ್ತರಿಯಿಂದ ಕತ್ತರಿಸಿ ನಂತರ ಮಾತ್ರ ತೆಗೆದುಕೊಂಡನು. ಆಗ ಅವನ ಹೆಂಡತಿ ಕೇಳಿದ್ಲು.
“ಯಾಕ್ರೀ ಹೀಗೆ ಮಾಡ್ತಿದ್ದೀರಾ?”
ಆಗ ತಿಮ್ಮ ಹೇಳಿದ “ಈ ಮಾತ್ರೆಯಿಂದ ಸೈಡ್ ಎಫೆಕ್ಟ್ ಆಗಬಾರದಲ್ಲ ಅದಕ್ಕೆ.”
*****
ಪತ್ರಿಕೆಯಲ್ಲಿ
ತಿಮ್ಮ ತನ್ನ ಗೆಳೆಯನಿಗೆ ಹೇಳಿದ “ಅಂತೂ ನನ್ನ ಅಣ್ಣನ ಹೆಸರು, ಪತ್ರಿಕೆಯಲ್ಲಿ ಬಂತು.”
“ಹೌದಾ ಯಾವ ಪತ್ರಿಕೆಯಲ್ಲಿ ಬಂತು..?”
“ಅವನ ಲಗ್ನ ಪತ್ರಿಕೆಯಲ್ಲಿ”
*****
ಸತ್ತವರು ಯಾರು?
ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು”
“ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?”














