ಸ್ಕೂಲಿನಲ್ಲಿ ಒಬ್ಬ ಹುಡುಗ ಅಳುತ್ತಾ ಪ್ರಿನ್ಸಿಪಲ್‍ರವರ ಬಳಿಗೆ ಬಂದ.
“ಯಾಕೆ ಅಳುತ್ತಾ ಇಲ್ಲಿಗೆ ಬಂದೆ?” ಕೇಳಿದರು
ಪ್ರಿನ್ಸಿಪಾಲರು- “ಯಾರು ನಿನ್ನನ್ನು ಇಲ್ಲಿಗೆ ಕಳಿಸಿರೋದು?” ಮತ್ತೆ ಪ್ರಶ್ನಿಸಿದರು.
ಸರ್ ನಾನು ಸರಿಯಾಗಿ ಉತ್ತರ ಹೇಳಲಿಲ್ಲವೆಂದು ಇಂಗ್ಲಿಷ್ ಲೆಕ್ಚರರ್, you fool “go to a devil and get lost”ಎಂದು ಬಿಟ್ಟರು ಅದಕ್ಕೇ ನಾನು ನೇರವಾಗಿ ತಮ್ಮ ಬಳಿಗೆ ಬಂದು ಬಿಟೈ!” ಆಂದ.
***
ಫ್ಯಾಕ್ಟರಿ ಮಾಲೀಕ: (ಕೆಲಸಕ್ಕೆ ಸೇರಲು ಬಂದವನಿಗೆ) ‘ಏನಯ್ಯಾ ಮಾರಾಟದ ಕೆಲಸದಲ್ಲಿ ಚೆನ್ನಾಗಿ ಅನುಭವ ಇದೆ ತಾನೆ? ಕೊಂಚ ನಿನ್ನ ಅನುಭವಗಳನ್ನು ಹೇಳುನೋಡೋಣ.’
ಆತ: “ಚೆನ್ನಾಗಿಯೇ ಅನುಭವವಿದೆ. ನನ್ನ ಮನೆ ಮಾರಿದ ನಂತರ ನನ್ನ ಕಾರುಮಾರಿದೆ. ತದನಂತರ ನನ್ನ ಹೆಂಡತಿಯ ಒಡವೆಗಳೆಲ್ಲವನ್ನೂ ಮಾರಿದೆ. ಇದಕ್ಕಿಂತ ಬೇರೆ ಆನುಭವ ಬೇಕೆ? ಸ್ವಾಮೀ!”
***
ಶೇಖರ ಮತ್ತು ಶಂಕರ ಇಬ್ಬರೂ ಸ್ನೇಹಿತರು. ಒಂದು ದಿನ ಟೈಂಪಾಸ್ ಗೆಂದು ಶೇಖರ ಸ್ನೇಹಿತನ ಮನೆಗೆ ಬಂದು ಆದೂ ಇದೂ ಮಾತನಾಡತೊಡಗಿದ.
ಶೇಖರ: ‘ನೀನು ಒಂದು ಹುಲಿಯ ಗುಹೆಗೆ ಹೋಗಿ ಆಲ್ಲಿ ಅರ್ಧಘಂಟೆ ಇದ್ದು ನಂತರ ಈಚೆಗೆ ಬರಬಲ್ಲಯಾ?’
ಶಂಕರ: “ಖಂಡಿತವಾಗಿ ಹುಲಿಗುಹೆಗೆ ಹೋಗಿ ಎಷ್ಟೊತ್ತು ಬೇಕಾದರೂ ಇದ್ದು ಬರಬಲ್ಲೆ. ನನಗೆ ಧೈರ್ಯ ಬೇಕಾದಷ್ಟು ಇದೆ. ಆದರೆ ಒಂದು ವಿಷಯ. ಹುಲಿ ಮಾತ್ರ ಆ ಸಮಯದಲ್ಲಿ ಗುಹೆಯೊಳಗೆ ಇರಬಾರದು, ಅಷ್ಟೆ!”