ಶಂಕರ: “ಲೋ ದಿವಾಕರ, ನೀನು ಒಂದು ತಿಂಗಳು ರಜಾ ಹಾಕಿ ಊರಿಗೆ ಹೋದೆಯಲ್ಲಾ, ಅಲ್ಲಿ ಹೇಗೆ ಕಾಲ ಕಳೆದೆ?”
ದಿವಾಕರ: “ಮೊದಲನೆಯ ದಿನ ಕುದುರೆ ಸವಾರಿಯಲ್ಲಿ ಕಾಲಕಳೆದೆ. ಮಾರನೆಯ ದಿನದಿಂದ ರಜಾ ಮುಗಿಯುವವರೆಗೂ ಆಸ್ಪತ್ರೆಯಲ್ಲಿ ಕಳೆದೆ!”
***
ತಂದೆ: ಪೋಲಿ ಹುಡುಗರ ಸಹವಾಸ ಬಿದ್ದು ಕುಡಿತಕ್ಕೆ ದಾಸನಾಗಿದ್ದ ಮಗನಿಗೆ ಹೇಳಿದರು. “ಮಗೂ, ಕುಡಿತ ತುಂಬಾ ಕೆಟ್ಟದ್ದು. ಕುಡಿದರೆ ಅಲ್ಲಿ ಮರದ ಮೇಲೆ ಎರಡು ಹಕ್ಕಿಗಳು ಇವೆಯಲ್ಲಾ ಅವು ನಾಲ್ಕು ಹಕ್ಕಿಗಳ ತರಹ ಕಾಣುತ್ತವೆ- ಕಣ್ಣು ಹಾಳಾದೀತು.”
ಮಗ: “ಅಪ್ಪಾ, ಮರದ ಮೇಲೆ ಎರಡು ಹಕ್ಕಿಗಳಲ್ಲಪ್ಪಾ ಇರೋದು ಒಂದೇ ಹಕ್ಕಿ!”
***
ಅಪ್ಪ: “ಮಗಳೇ ನಿನಗೊಬ್ಬ ಡಾಕ್ಟರ್ ಗಂಡು ಹುಡುಕಿದ್ದೀನಿ. ನೀನು ಮದುವಗೆ ಸಿದ್ದಳಾಗು.”
ಮಗಳು: “ಏನು? ಎಲ್ಲಾ ಬಿಟ್ಟು ಡಾಕ್ಟರ್ ಕೈ ಹಿಡಿಯ ಬೇಕೆ? ನಾನು ಒಲ್ಲೆ.”
ಅಪ್ಪ: “ಯಾಕಮ್ಮಾ ಡಾಕ್ಟರ್ ಗಿಂತ ಭಾರಿ ಗಂಡು ಬೇಕೆ?”
ಮಗಳು: “ಹಾಗಲ್ಲಪ್ಪ, ಡಾಕ್ಟರ್ ಆದರೆ ಆತನ ಸಂಗಡ ಸದಾ ನರ್ಸ್ ಇರ್ತಾಳೆ.!”