ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ “ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?”
ಈತ: “ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ”.
ಆತ: “ನನ್ನ ಗುರುತು ಸಿಕ್ಕಿತಾ ನಿಮಗೆ?”
ಈತ: “ಸಿಗದೆ ಏನಪ್ಪಾ?”
ಆತ: “ನಾನು ಯಾರು ಹೇಳಿ ನೋಡೋಣ?’
ಈತ: “ನೀನು ಇದರಲ್ಲಿ ಇದಾಗಿರಲಿಲ್ಲವೆ?’
ಆತ: “ಪರವಾಗಿಲ್ಲ ನಿಮ್ಮ ಜ್ಜಾಪಕಶಕ್ತಿ ಇನ್ನೂ ಚಿನ್ನಾಗಿಯೇ ಇದೆ!’
****
ಆತ ಅ ರಾತ್ರಿ ಚೆನ್ನಾಗಿ ಕುಡಿದು ದಾರಿಯಲ್ಲಿ ಮನೆಕಡೆಗೆ ಬರುತ್ತಲಿದ್ದ. ತೂರಾಡಿಕೊಂಡು ಬರುತ್ತಿದ್ದ ಅವನನ್ನು ನೋಡಿ ನಾಯಿಗಳು ಬೊಗಳಲು ಆರಂಭಿಸಿದವು. ಭಯಗೊಂಡವನು ಹತ್ತಿರವಿದ್ದ ಮನೆಯೊಂದರ ಬಾಗಿಲು ಬಡಿದ, ‘ಯಾರು?’ ಒಳಗಿನಿಂದ ಹೆಂಗಸು ಬಂದು ಬಾಗಿಲು ತೆಗೆದು ವಿಚಾರಿಸಿದಳು. ತೊದಲುತ್ತಾ “ಓಹ್ ನೀನಾ ಚಿನ್ನಾ ಎಷ್ಟೊಂದು ಸುಂದರವಾಗಿ ಕಾಣುತ್ತೀ” ಅಂದ ಅವಳಿಗೆ ಕೋಪ ನೆತ್ತಿಗೇರಿ ಬಾಗಿಲು ಬಳಿ ಇದ್ದ ಚಪ್ಪಲಿ ಹಿಡಿದು ಅವನಿಗೆ ನಾಲ್ಕು ಬಾರಿಸಿದಳು. ಒಳಗಿನಿಂದ ಪತಿರಾಯ ಇದನ್ನೆಲ್ಲಾ ಗಮನಿಸುತ್ತಾ “ಹಾಕು ಇನ್ನು ನಾಲ್ಕು ಚೆನ್ನಾಗಿ ಹಾಕು” ಅಂದ. “ಅದ್ಯಾಕೆ ಹಾಗೆ ಅಂತಾ ಇದ್ದೀರಿ?” ಕೇಳಿದಳು:
ಗಂಡ: “ನಾನು ಈಗತಾನೆ ಅವನ ಹೆಂಡ್ತಿ ಕೈಲಿ ಚೆನ್ನಾಗಿ ಥಳಿಸಿಕೊಂಡು ಬಂದಿದ್ದೇನೆ ಅದಕ್ಕೆ.” ಅಂದ ಅವಳು ಸುಸ್ತಾದಳು
****
ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು
ತಂದೆ: “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ? ಅದೇನೂಂತ ಹೇಳು”
ಮಗ: “ ನೀನೇ ಹೇಳಿದ್ದಯಲ್ಲಪ್ಪಾ ದೇವರ ಮೇಲೆ ಭಾರ ಹಾಕಿ ಪರೀಕ್ಷೆಗೆ ಹೋಗಿ ಬರೆದು ಬಾ ಎಂದು ಅದನ್ನೇ ನಾನು ಮಾಡಿರೋದು!”