ಆಗರ್ಭಶ್ರೀಮಂತರು ಆಚ್ಚುತರಾಯರು. ಒಂದು ದಿನ ಸಂಜೆ ವೇಳೆ ಬಂದು ಮನೆ ಮೆಟ್ಟಿಲುಗಳೆಲ್ಲ
ಒದ್ದೆಯಾಗಿದ್ದವು. ಅಕಸ್ಮಾತ್ ಮೆಟ್ಟಲು ಮೇಲೆ ಕಾಲು ಇಟ್ಟಾಗ ಜಾರಿ ಬಿದ್ದರು. ಆಳು ಇದನ್ನು ಗಮನಿಸುತ್ತ ‘ಕಿಸಕ್’ ಎಂದು ನಗಾಡಿದ, ರಾಯರಿಗೆ ಕೋಪ ಬಂದು “ಯಾಕಲೋ ನಾನು ಬಿದ್ದಿದ್ದಕ್ಕೆ ದುಃಖ ಪಡುವ ಬದಲು ಹಾಗೆ ನಗುತ್ತಿದ್ದೀಯಾ? “ಕೇಳಿದರು
ಆಳು: “ಹೇಗೂ ನೀವು ಸಾವರಿಸಿಕೊಂಡು ಎದ್ದು ಬಂದೇ ಬರ್ತೀರಂತ ನೆನೆಸಿಕೊಂಡೆ, ಅಷ್ಟಕ್ಕೇ ನಗು ಬಂದುಬಿಟ್ಟಿತು”.
****
ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ “ನನ್ನ ಮಗ ಆರುತಿಂಗಳಿಂದ ಕೋಮಾದಲ್ಲಿದ್ದಾನೆ
ನ್ನೇಹಿತ: (ಕೋಮಾ ಎಂದರೆ ದೊಡ್ಡ ಕಂಪನಿಯೆಂದು ಭ್ರಮಿಸಿ) “ಏನು ಕೆಲಸವಂತೆ? ಸಂಬಳ ಎಷ್ಟಂತೆ?”
-*****
ತಿಂಗಳ ಕೊನೆಯಲ್ಲಿ ಗಂಡ ತನ್ನ ಜೋಬಿನಿಂದ ಬೀಗದ ಕೈ ತೆಗೆದು ಗೋಲಕದ ಬೀಗ ತೆಗೆದ. ಅವನ
ಆಶ್ಚರ್ಯಕ್ಕೆ ಬರೀ ೫೦ ಪೈಸೆ ಹಾಗು ಒಂದು ರೂಪಾಯಿಯ ನಾಣ್ಯಗಳೇ ಇದ್ದವು. ಗಂಡನಿಗೆ ತುಂಬಾ
ಕೋಪಬಂತು. ಹೆಂಡತಿಯನ್ನು ಕೇಳಿದ “ಈ ನಾಣ್ಯಗಳೆಲ್ಲಾ ಹೇಗೆಬಂದವು ನಾನು ನಾಲ್ಕಾಣೆ
ನಾಣ್ಯಗಳನ್ನು ಹಾಕುತ್ತಿದ್ದೆ?”. ರೇಗಿದ
ಹೆಂಡತಿ: ಚುರುಕಾಗಿ ಉತ್ತರಿಸಿದಳು: “ಎಲ್ಲರೂ ನಿಮ್ಮಷ್ಟು ಜಿಪುಣರಲ್ಲ!”