ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡ್ತಿ: ನೆನ್ನೆ ಮನೆಗೆ ಬಂದ ಭಿಕ್ಷುಕ ತುಂಬಾ ಕೆಟ್ಟವನಿದ್ದ.

ಜಗ್ಗು: ಯಾಕೆ? 

ಹೆಂಡತಿ : ನಿನ್ನೆ ನಾನು ತಿಂಡಿ ಕೊಟ್ಟಿದ್ದೆ ಇವತ್ತು ಬಂದು ಅಡುಗೆ ಮಾಡುವುದು ಹೇಗೆ ಎಂಬ ಪುಸ್ತಕವನ್ನು ನನಗೆ ಗಿಫ್ಟ್ ಕೊಟ್ಟು ಹೋದ.

Join Our Whatsapp Group

*****

ಗಂಡ : ಈ ರಾತ್ರಿ ನನಗೆ ಕೆಟ್ಟ ಕನಸು ಬಿತ್ತು ಕನಸಿನಲ್ಲಿ ನಾನು ವಿಧುರನಾದೆ.

ಹೆಂಡತಿ : ಅಯ್ಯೋ ದೇವರೇ, ನಿಮ್ಮನ್ನು ದೇವರು ವಿಧುರನ್ನಾಗಿ ಮಾಡದಿರಲಿ ನಾನೆ ವಿಧವೆಯಾದರೂ ಆದಿತು.

*****

ಟೀಚರ್: ಮಕ್ಕಳೇ ನೀವು ಚೆನ್ನಾಗಿ ಓದಿ, ದೇಶಕ್ಕೆ ಒಳ್ಳೆ ಹೆಸರು ತರಬೇಕು.

ಬಾಲು : ಯಾಕೆ ಮೇಡಂ “ಭಾರತ” ಎನ್ನುವ ಹೆಸರು ಚೆನ್ನಾಗಿಲ್ಲವಾ ?

****

ಮಗಳು : ಅಪ್ಪ ನನಗೆ ಮದುವೆ ಬೇಡ- ಮಗಳೆಂದಳು.

ಅಪ್ಪ: ಯಾಕೆ ಮಗಳು ಅಮ್ಮನನ್ನು ಬಿಟ್ಟಿರಲಾರೆ.

ಅಪ್ಪ: ಅವಳನ್ನು ಕರೆದುಕೊಂಡು ಹೋಗು

*****

ಮಲಗಿದ್ದ ಗಂಡನನ್ನು ನಡುರಾತ್ರಿ ಹೆಂಡತಿ ಎಬ್ಬಿಸಿದಳು 

ಗಂಡ : (ಸಿಡಿಮಿಡಿಗೊಂಡು) ಏಕೆಬ್ಬಿಸಿದೆ?

ಹೆಂಡತಿ : ನಿಮಗೆ ನಿದ್ದೆ ಗುಳಿಗೆಯನ್ನು ಕೊಡಲು ಮರೆತಿದ್ದೆ ಅದಿಕ್ಕೆ

****

ಗೌರಿ : 10 ವರ್ಷದ ಹಿಂದೆ ಡೈವರ್ಸ್ ಕೊಟ್ಟ ನಿನ್ನ ಗಂಡನ ಬಗೆಗೆ ಈಗ ಯಾಕೆ ಬೇಜಾರು ಮಾಡ್ಕೋತಿದಿಯ ?

ಸೀಮಾ : ಅವರಿಗೆ ಡೈವೋರ್ಸ್ ಕೊಡಬಾರದಿತ್ತು ಅಂತ ಈಗ ಅನಿಸ್ತಿದೆ. 

ಗೌರಿ :  ಈಗ ಯಾಕೆ ಆಗನಿಸುತ್ತಿದೆ?

ಸೀಮಾ : ಡೈವೋರ್ಸ್ ಕೊಟ್ಟು ಅನ್ಯಾಯವಾಗಿ ಅವರ ಸುಖವಾಗಿ ಬದುಕೋಕೆ ಹಾಗೆ ಮಾಡಿದ್ನಲ್ಲಾ ಅಂತ.