ಮನೆ ಮನರಂಜನೆ ಫೆಬ್ರವರಿ 9ರಂದು ‘ಜಸ್ಟ್‌ ಪಾಸ್‌’ ಚಿತ್ರ ಬಿಡುಗಡೆ

ಫೆಬ್ರವರಿ 9ರಂದು ‘ಜಸ್ಟ್‌ ಪಾಸ್‌’ ಚಿತ್ರ ಬಿಡುಗಡೆ

0

 ಜಸ್ಟ್‌ ಪಾಸ್‌ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್‌ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಕೆ.ಎಂ.ರಘು, “ಚಿತ್ರ ಇಷ್ಟು ಅದ್ಧೂರಿಯಾಗಿ ಬರಲು ನಮ್ಮ ನಿರ್ಮಾಪಕ ಕೆ.ವಿ.ಶಶಿಧರ್‌ ಅವರು ಕಾರಣ. ಯಾವುದೇ ಕೊರತೆ ಇಲ್ಲದೇ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರಿಗೂ ನಾನು ಈ ಸಮಯದಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದರು.

ನಿರ್ಮಾಪಕ ಕೆ.ವಿ.ಶಶಿಧರ್‌ ಮಾತನಾಡಿ, “ಟ್ರೇಲರ್‌ ನೋಡಿದ ಮೇಲೆ ಬಹಳ ಖುಷಿಯಾಯಿತು. ಚಿತ್ರ ಕೂಡ ಚೆನ್ನಾಗಿ ಬಂದಿದೆ. ಫೆಬ್ರವರಿ 9ರಂದು ಬಿಡುಗಡೆ ಯಾಗುತ್ತಿದೆ. ನೋಡಿ, ಪ್ರೋತ್ಸಾಹ ನೀಡಿ’ ಎಂದರು.

ಈ ಚಿತ್ರದಲ್ಲಿ ಶ್ರೀ ನಾಯಕರಾಗಿ ನಟಿಸಿದ್ದು, ಚಿತ್ರ ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವ ಕಂಟೆಂಟ್‌ ಒಳಗೊಂಡಿದೆ ಎನ್ನುವುದು ಅವರ ಮಾತು. ಪ್ರಣತಿ ಈ ಚಿತ್ರದ ನಾಯಕಿ. “ನಾನು ಕೂಡ ಈ ಚಿತ್ರದಲ್ಲಿ ಜಸ್ಟ್‌ಪಾಸ್‌ ವಿದ್ಯಾರ್ಥಿ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಸಂಗೀತ ನಿರ್ದೇಶಕ ಹರ್ಷವರ್ಧನ್‌ ರಾಜ್, ಛಾಯಾಗ್ರಾಹಕ ಸುಜಯ್‌ ಕುಮಾರ್‌ ಹಾಡು ಬರೆದಿರುವ ಪ್ರಮೋದ್‌ ಮರವಂತೆ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರಾದ ಜಸ್ಟ್‌ ಪಾಸ್‌ ಚಿತ್ರದ ಮಾಹಿತಿ ಹಂಚಿಕೊಂಡರು.

ಈಗಾಗಲೇ ಬಿಡುಗಡೆಯಾಗಿರುವ “ಜಸ್ಟ್‌ಪಾಸ್‌’ ಸಿನಿಮಾದ ಫ‌ಸ್ಟ್‌ಲುಕ್‌, ಟೀಸರ್‌, ಹಾಡುಗಳು ಹಾಗೂ ಟ್ರೇಲರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರ ತಂಡ ಅದ್ಧೂರಿ ಯಾಗಿ ಸಿನಿಮಾವನ್ನು ಥಿಯೇಟರ್‌ ಗೆ ತರುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂದಹಾಗೆ ಹೊಸ ಹುಡುಗರ ಕಾಲೇಜ್‌ ಕಹಾನಿ ಒಂದಷ್ಟು ಕುತೂಹಲ ಮೂಡಿಸಿದ್ದು, ಚಿತ್ರ ಹೇಗಿದೆ ಎಂಬುದು ಫೆಬ್ರವರಿ ಅಂತ್ಯದೊಳಗೆ ಗೊತ್ತಾಗಲಿದೆ.

ಹಿಂದಿನ ಲೇಖನಕಾರಿಗೆ ಟ್ರಕ್ ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಐವರು ಸಾವು
ಮುಂದಿನ ಲೇಖನಹನುಮ‌ ಧ್ವಜ ತೆರವು: ಕೆರಗೋಡು ಗ್ರಾಮದಿಂದ ಮಂಡ್ಯ ಡಿಸಿ ಕಚೇರಿವರೆಗೆ ಪಾದಯಾತ್ರೆ