ಮನೆ ಸುದ್ದಿ ಜಾಲ ಕಾವ್ಯಾ ಮಾರನ್‌ಗೆ ಕೂಡಿಬಂತು ಕಂಕಣ ಭಾಗ್ಯ – ಹಸೆಮಣೆ ಏರುವ ಸಾಧ್ಯತೆ..!

ಕಾವ್ಯಾ ಮಾರನ್‌ಗೆ ಕೂಡಿಬಂತು ಕಂಕಣ ಭಾಗ್ಯ – ಹಸೆಮಣೆ ಏರುವ ಸಾಧ್ಯತೆ..!

0

ಸನ್‌ ಗ್ರೂಪ್‌ ಮುಖ್ಯಸ್ಥ ಕಲಾನಿಧಿ ಮಾರನ್‌ ಪುತ್ರಿ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮಾಲಕಿ ಕಾವ್ಯಾ ಮಾರನ್‌ ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ರೆ ಈ ವರ್ಷಾಂತ್ಯದಲ್ಲೇ ಹಸೆಮಣೆ ಏರಲಿದ್ದಾರೆ. ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್‌ ಹಾಗೂ ಕಾವ್ಯಾ ಮಾರನ್‌ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿಬರುತ್ತಲೇ ಇದ್ದವು.

ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಮತ್ತು ಅಲ್ಲಿ ಡಿನ್ನರ್‌ ಡೇಟ್ ಎಂಜಾಯ್ ಮಾಡುತ್ತಿದ್ದರಂತೆ, ಇದೀಗ ಇಬ್ಬರ ಸಂಬಂಧಕ್ಕೆ ಕುಟುಂಬದವರಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಈ ವರ್ಷಾಂತ್ಯದಲ್ಲೇ ಇಬ್ಬರು ಹಸೆಮಣೆ ಏರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದ್ರೆ ಅನಿರುದ್ಧ್ ಮದುವೆ ಆಗಲ್ಲ, ಇದೆಲ್ಲ ಗಾಳಿ ಸುದ್ದಿ ಎಂದಿದ್ದಾರೆ.

ಕಾವ್ಯಾ ಮಾರನ್‌ಗೆ ಈಗ 33 ವರ್ಷ ಮತ್ತು ಅನಿರುದ್ಧ್‌ಗೆ 35 ವರ್ಷ ವಯಸ್ಸು ಮತ್ತು ಸ್ಟೇಟಸ್‌ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್‌ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ಬೆಂಕಿ ಹಚ್ಚುವ ಅನಿರುದ್ಧ್ ನಿಜಕ್ಕೂ ಒಂದಾಗುತ್ತಾರಾ? ಅನ್ನೋ ರಹಸ್ಯಕ್ಕೆ ಆಗಸ್ಟ್‌ನಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.