ಮನೆ ಸುದ್ದಿ ಜಾಲ ಕೋಡಿ ಬಿದ್ದ ಕೆರೆ: ಬೈಕ್’ನಲ್ಲಿ ತೆರಳುತ್ತಿದ್ದ ಬಾಲಕಿ ನೀರಿನಲ್ಲಿ ಮುಳುಗಿ ಸಾವು

ಕೋಡಿ ಬಿದ್ದ ಕೆರೆ: ಬೈಕ್’ನಲ್ಲಿ ತೆರಳುತ್ತಿದ್ದ ಬಾಲಕಿ ನೀರಿನಲ್ಲಿ ಮುಳುಗಿ ಸಾವು

0

ಹಾಸನ(Hassan): ಬಾಗೂರು ಹೋಬಳಿಯ ದಡ್ಡಿಹಳ್ಳಿ ಕೆರೆ ಕೋಡಿ ಬಿದ್ದಿದ್ದು, ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ.

ಗ್ರಾಮದ 5 ನೇ ತರಗತಿಯ ವಿದ್ಯಾರ್ಥಿನಿ ರಂಜಿತಾ ಮೃತಪಟ್ಟ ಬಾಲಕಿ.

ಗುರುವಾರ ಬೆಳಿಗ್ಗೆ ಹೊಲದಿಂದ ತನ್ನ ಸಂಬಂಧಿಯ ಜೊತೆಗೆ ಈ ಬಾಲಕಿ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಕೆರೆಯ ಕೋಡಿ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದೆ. ಇದನ್ನು ನೋಡಿದ ವೃದ್ಧೆಯೊಬ್ಬರು, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ‌.

ಗ್ರಾಮಸ್ಥರು ಬೈಕ್ ಓಡಿಸುತ್ತಿದ್ದ ಯುವಕನನ್ನು ರಕ್ಷಿಸಿದ್ದಾರೆ. ಆದರೆ, ಬಾಲಕಿ ರಂಜಿತಾ ನೀರಿನಲ್ಲಿ ಮುಳುಗಿ‌ ಮೃತಪಟ್ಟಿದ್ದಾಳೆ.

ಹಿಂದಿನ ಲೇಖನನ್ಯಾಯಾಲಯ ಸುದೀರ್ಘ ರಜೆ ಪ್ರಶ್ನಿಸಿದ್ದ ಅರ್ಜಿ: ದೀಪಾವಳಿ ರಜೆ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ ಬಾಂಬೆ ಹೈಕೋರ್ಟ್
ಮುಂದಿನ ಲೇಖನದೈವ ನರ್ತಕರಿಗೆ ಮಾಸಾಶನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ