ಮನೆ ದೇವಸ್ಥಾನ ಕೆಆರ್’ಎಸ್ ನೀರಿನ ಮಟ್ಟ ಕುಸಿತ: ಐತಿಹಾಸಿಕ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಗೋಚರ

ಕೆಆರ್’ಎಸ್ ನೀರಿನ ಮಟ್ಟ ಕುಸಿತ: ಐತಿಹಾಸಿಕ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಗೋಚರ

0

ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ಕೆಆರ್’ಎಸ್ ಜಲಾಶಯದ ನೀರಿನ ಮಟ್ಟ 81.03 ಅಡಿಗೆ ಕುಸಿದಿರುವ ಪರಿಣಾಮ ಹಿನ್ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿದೆ.

Join Our Whatsapp Group

ಜಲಾಶಯ ನಿರ್ಮಾಣದ ವೇಳೆ ಸ್ಥಳಾಂತರಿಸದೆ ಹಾಗೇ ಬಿಟ್ಟಿದ್ದ ಶಿಲಾ ದೇಗುಲ ಸಂಪೂರ್ಣ ಗೋಚರಿಸುತ್ತಿದೆ. 2019ರ ನಂತರ ದೇವಾಲಯ ಮತ್ತೆ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿದೆ. ಮೈಸೂರು ತಾಲ್ಲೂಕಿನ ಆನಂದೂರು ಮತ್ತು ಮಲ್ಲೇಗೌಡನಕೊಪ್ಪಲು ವ್ಯಾಪ್ತಿಯಲ್ಲಿರುವ ದೇವಾಲಯವನ್ನು ಜನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ದೇವಾಲಯದ ಬಳಿ ಸೆಲ್ಫಿ ತೆಗೆದುಕೊಳ್ಳುವುದು, ಸುತ್ತಲೂ ವಿಹರಿಸುವುದು ಸಾಮಾನ್ಯವಾಗಿದೆ.

ಜಲಾಶಯಕ್ಕೆ ಶುಕ್ರವಾರ 448 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ಮತ್ತು ನಾಲೆಗಳಿಗೆ 3,009 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. 49 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 11.37 ಟಿಎಂಸಿ ಅಡಿಗಳಷ್ಟು ನೀರಿದೆ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 104.8 ಅಡಿ ನೀರಿತ್ತು. 2,900 ಕ್ಯುಸೆಕ್ ಒಳ ಹರಿವು, 2,387 ಕ್ಯುಸೆಕ್ ಹೊರ ಹರಿವು ದಾಖಲಾಗಿತ್ತು. 26.81 ಟಿಎಂಸಿ ಅಡಿಗಳಷ್ಟು ನೀರಿ ಸಂಗ್ರಹ ಇತ್ತು. ಜಲಾಶಯದ ನೀರಿನ ಮಟ್ಟ 72 ಅಡಿಗೆ ಕುಸಿದರೆ ಹಿನ್ನೀರಿನಲ್ಲಿ ಮುಳುಗಿರುವ ಕಣ್ಣೇಶ್ವರ ದೇವಾಲಯ ಗೋಚರಿಸಲಿದೆ.

ಹಿಂದಿನ ಲೇಖನಅಕ್ರಮ ಮದ್ಯ ಸಾಗಾಟ: 2.47ಕೋಟಿ ಮೌಲ್ಯದ ಮದ್ಯ ವಶ
ಮುಂದಿನ ಲೇಖನಟ್ವಿಟರ್’ನಲ್ಲಿ ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ