ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗೀತಾ : ಏನೇ ಅನ್ನಿ, ನೀವು ನನ್ನ ಚಲನಚಿತ್ರದ ಹೀರೋಗಳ ತರಹ ಲವ್ ಮಾಡಲ್ಲ.

ರಾಜು : ಹೀರೋ ಲವ್ ಮಾಡೋಕೆ ನಿರ್ಮಾಪಕರು ಲಕ್ಷಗಟ್ಟಲೆ ಕೊಡುತ್ತಾರೆ. ನಿಮ್ಮಪ್ಪನಂಗೇನು ಕೊಟ್ಟ. 

***

ಕಿಟ್ಟು : ಚೆಲುವೆ ಹತ್ತಿರವಿದ್ದಾಗ ?

ರಾಜು : ಕಾಮನಬಿಲ್ಲು.

ಕಿಟ್ಟು : ಚೆಲುವೆ ದೂರ ಹೋದಾಗ ?

ರಾಜು : ಆಗ ಹೆಚ್ಚಾಗುವುದು ಫೋನ್ ಬಿಲ್ಲು.

ಕಿಟ್ಟು : ಚೆಲುವೆ ಕೈ ಕೊಟ್ಟರೆ ?

ರಾಜು : ಆಗ ಸಿಕ್ಕಾಪಟ್ಟೆ ಆಗುವುದು ಬಾರ್ ಬಿಲ್ಲು.

***

ಟೀಚರ್ : ಮದ್ರಾಸಿನಲ್ಲಿ (ಇಂದಿನ ಚೆನ್ನೈನಲ್ಲಿ) ಕ್ರಿಕೆಟ್ ಮ್ಯಾಚ್ ನಡೀತಾ ಇದೆ. ಇಲ್ಲಿಗೆ ಸುನಾಮಿ ಬಂದ್ರೂ ನಮ್ಮ ಇಂಡಿಯಾ ಟೀಮ್ ಗೆ ಅಪಾಯ ಇಲ್ಲ ಏಕೆ?

ರಾಜು : ನಮ್ಮ ಇಂಡಿಯನ್ ಟೀಮಿನಲ್ಲಿ ದೋಣಿ(ಧೋನಿ) ಇದೆ ಅದಕ್ಕೆ.

***

ಶಿಕ್ಷಕ : ರಾಜು ನಿನಗೊಂದು ಪ್ರಶ್ನೆ ಕೇಳಲಾ ?

ರಾಜು : ಕೇಳಿ ಸರ್

ಶಿಕ್ಷಕ : ಇಂಗ್ಲೆಂಡಿನವರಿಗೆ ತುಂಬಾ ಕನ್ಫ್ಯೂಸಿಂಗ್ ಆದ ದಿನ ಯಾವುದು?

ರಾಜು : ವೆರಿ ಸಿಂಪಲ್ ಫಾದರ್ಸ್ ಡೇ.

ಹಿಂದಿನ ಲೇಖನಉತ್ಥಿತ ಪಾರ್ಶ್ವಕೋನಾಸನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ