ಬೆಂಗಳೂರು : ಬೆಂಗಳೂರಿನಲ್ಲಿ ಈಗಾಗಲೇ ಪ್ರಾಪರ್ಟಿ ಹಾಗೂ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಬೆಂಗಳೂರಿನೊಂದಿಗೆ ದಕ್ಷಿಣ ಭಾರತದ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ ಪ್ರಮುಖ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸಿದೆ. ಇದೀಗ ಇದರಿಂದ ಪರೋಕ್ಷವಾಗಿ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವ ನಿರೀಕ್ಷೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಜಾರಿಯಾಗುತ್ತಿರುವ ಹೊಸ ಯೋಜನೆ ಯಾವುದು ಹಾಗೂ ಇದರಿಂದ ಭೂಮಿ – ಪ್ರಾಪರ್ಟಿ ಬೆಲೆ ಹೇಗೆ ಹೆಚ್ಚಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ಪ್ರಾದೇಶಿಕ ಸಂಪರ್ಕವನ್ನು ವೃದ್ಧಿಸುವ ಉದ್ದೇಶದಿಂದ ಹಾಗೂ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮಹತ್ವದ ಉದ್ದೇಶದಿಂದ ಹೈದರಾಬಾದ್-ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಚಯಿಸಿದೆ.
ಈ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯು ಈಚೆಗೆ ಅನುಮೋದಿಸಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಪ್ರಕಾರ, ಹೈದರಾಬಾದ್-ಬೆಂಗಳೂರು ಕಾರಿಡಾರ್ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 8.5 ಗಂಟೆಗಳಿಂದ ಸುಮಾರು ಎರಡು ಗಂಟೆಗಳವರೆಗೆ ಕಡಿಮೆ ಮಾಡಲಿದೆ.
606 ಕಿಮೀ ಕಾರಿಡಾರ್ ಕರ್ನಾಟಕದಲ್ಲಿ ಸುಮಾರು 100 ಕಿಮೀ ಮೂಲಕ ಹಾದುಹೋಗುತ್ತದೆ. ಇದರಲ್ಲಿ ಮುಖ್ಯವಾಗಿ ತುಮಕೂರು ಜಿಲ್ಲೆಯ ಮೂಲಕ ಸಾಗಲಿದ್ದು ಮತ್ತು ಗೌರಿಬಿದನೂರು, ದೇವನಹಳ್ಳಿ ಮತ್ತು ಕೋಡಿಹಳ್ಳಿಯಂತಹ ಪ್ರದೇಶಗಳ ವ್ಯಾಪ್ತಿಯಲ್ಲೂ ಬರಲಿದೆ. 306 ಕಿಮೀ ವ್ಯಾಪ್ತಿಯ ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಯು ಕರ್ನಾಟಕದ ಕೋಲಾರ, ಕೋಡಿಹಳ್ಳಿ, ವೈಟ್ಫೀಲ್ಡ್ ಮತ್ತು ಬೈಯಪ್ಪನಹಳ್ಳಿಯಲ್ಲಿ ನಿಲ್ದಾಣಗಳನ್ನು ಒಳಗೊಂಡಿದೆ. ಕೋಡಿಹಳ್ಳಿ ಎರಡೂ ಕಾರಿಡಾರ್ಗಳನ್ನು ಸಂಪರ್ಕಿಸುವ ಮತ್ತು ನಮ್ಮ ಮೆಟ್ರೋ ನೆಟ್ವರ್ಕ್ನೊಂದಿಗೆ ಸಂಪರ್ಕಿಸುವ ಜಂಕ್ಷನ್ ಆಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಈ ಭಾಗದ ಭೂಮಿಗಳಿಗೆ ಭೂಮಿಗೆ ಬಂಗಾರದ ಬೆಲೆ ಬರಲಿದೆ.
ಈ ಯೋಜನೆಗಳು ಬೆಂಗಳೂರಿನ ಪೂರ್ವ ಮತ್ತು ಉತ್ತರ ಬೆಳವಣಿಗೆಯ ಕಾರಿಡಾರ್ಗಳಲ್ಲಿ, ವಿಶೇಷವಾಗಿ ದೇವನಹಳ್ಳಿ, ವೈಟ್ಫೀಲ್ಡ್, ಕೋಡಿಹಳ್ಳಿ ಮತ್ತು ಕೋಲಾರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಮೇಲೆ ಭಾರೀ ಪ್ರಭಾವ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ ಈ ಹೊಸ ರೈಲ್ವೆ ಯೋಜನೆ ಜಾರಿಯಿಂದಾಗಿ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಳ – ಇನ್ನು ಈಗಾಗಲೇ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದ್ದು, ಇದೀಗ ಈ ಯೋಜನೆಯಿಂದ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಸಹಜವಾಗಿಯೇ ಹೆಚ್ಚಳವಾಗುವ ಸಾಧ್ಯತೆಯಿದೆ.















