ಮನೆ ರಾಜ್ಯ ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು..!

ಫುಲ್​​ ಟೈಟ್​​ ಆಗಿ ಆಸ್ಪತ್ರೆಗೆ ಬಂದ ವೈದ್ಯನಿಗೆ ಸಾರ್ವಜನಿಕರಿಂದ ಧರ್ಮದೇಟು..!

0

ಮೈಸೂರು : ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ವೈದ್ಯ ಕೆಲಸದ ಸಮಯದಲ್ಲೇ ಮದ್ಯ ಸೇವಿಸಿ ರಂಪಾಟ ನಡೆಸಿದ್ದಾರೆ. ಕುಡಿದ ಅಮಿಲಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್​​ನಲ್ಲಿ ಅಶ್ಲೀಲ ಮೇಸೆಜ್ ಕೂಡ ಕಳುಹಿಸಿದ್ದ ಹಿನ್ನೆಲೆ ವೈದ್ಯ ಡಾ. ಅನಿಲ್ ಕುಮಾರ್​​ಗೆ ಸಾರ್ವಜನಿಕರು ಧರ್ಮದೇಟು ಕೊಟ್ಟಿದ್ದಾರೆ.

ಆಸ್ಪತ್ರೆ ಒಳಭಾಗದಲ್ಲೇ ಸಿಗರೇಟ್ ಸೇದುತ್ತಾ ಡಾ.ಅನಿಲ್ ಕುಮಾರ್ ಗಲಾಟೆ ಮಾಡಿದ್ದು, ಪ್ರತಿನಿತ್ಯ ವಾಟ್ಸ್ ಆ್ಯಪ್ ಗ್ರೂಪ್​​ನಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಕುಡಿದ ಅಮಿಲಿನಲ್ಲಿ ವೈದ್ಯ ರಂಪಾಟ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಮಾ.27ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸಿಬ್ಬಂದಿ ದೂರು ಕೂಡ ನೀಡಿದ್ದಾರೆ.