ಮನೆ ಅಪರಾಧ ಮಂಡ್ಯ: ಅತ್ತಿಗೆ, ಅಣ್ಣನ ಮಗನನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಬಾಮೈದ

ಮಂಡ್ಯ: ಅತ್ತಿಗೆ, ಅಣ್ಣನ ಮಗನನ್ನು ಕುಡುಗೋಲಿನಿಂದ ಕೊಚ್ಚಿ ಕೊಂದ ಬಾಮೈದ

0

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಅತ್ತಿಗೆ ಹಾಗೂ ಆಕೆಯ ಮಗನನ್ನು ಕುಡುಗೋಲಿನಿಂದ ಕೊಚ್ಚಿ ಕೊಂದಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಹೆಗಡಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ಏ.27 ರ ಮದ್ಯಾಹ್ನ ಶಾಂತಮ್ಮ ಹಾಗೂ ಯಶವಂತ್ ಎಂಬುವವರು ಗದ್ದೆಗೆ ನೀರು ಹಾಯಿಸಲು ತೆರಳಿದ್ದಾರೆ. ಇದೇ ವೇಳೆ ಗದ್ದೆ ಬಳಿ ಬಂದ ಮೈದುನ ಸತೀಶ್ ಎಂಬಾತ ನೀರಿನ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ. ಶಾಂತಮ್ಮ ಹಾಗೂ ಸತೀಶ್ ಗೂ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ, ರೊಚ್ಚಿಗೆದ್ದ ಸತೀಶ ಮಿಷನ್ ಮನೆಯಲ್ಲಿದ್ದ ಕುಡುಗೋಲು ತೆಗೆದುಕೊಂಡು ಬಂದು ಏಕಾಏಕಿ ದಾಳಿ ಮಾಡಿದ್ದಾನೆ.

ಶಾಂತಮ್ಮಳ ತಲೆ ಎದೆ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಮನಸೋ ಇಚ್ಛೆ ಕೊಚ್ಚಿ ಹಾಕಿದ್ದಾನೆ. ಕುಡುಗೋಲಿನ ಏಟಿಗೆ ಶಾಂತಮ್ಮ ಅರಚಾಡುತ್ತ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಅಮ್ಮನ ಚೀರಾಟ, ಕೂಗಾಟ ಕೇಳಿದ ಮಗ ಯಶವಂತ್ ಓಡಿ ಬಂದು, ತಾಯಿ ಸಹಾಯಕ್ಕೆ ಮುಂದಾಗಿದ್ದಾನೆ. ಈ ವೇಳೆ ಯಶವಂತ್ ಮೇಲೆಯೂ ದಾಳಿ ನಡೆಸಿದ ಸತೀಶ ಆತನನ್ನು ಕೊಚ್ಚಿ ಕೊಂದಿದ್ದಾನೆ.

ಇನ್ನು ಆರೋಪಿ ಕೊಲೆ ಮಾಡಿದ ಬಳಿಕ ಸಿದಾ ಮನೆಗೆ ಬಂದ ಸತೀಶ ಸ್ನಾನ ಮಾಡಿದ್ದಾನೆ. ಬಳಿಕ ತನ್ನ ಹೆಂಡತಿ ಮಕ್ಕಳನ್ನ ತವರು ಮನೆಗೆ ಕಳುಹಿಸಿದ್ದಾನೆ. ಆದಾದ ಬಳಿಕ ನೇರವಾಗಿ ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಚಾಕುವಿನಿಂದ ಇರಿದು ವಿದ್ಯಾರ್ಥಿಯ ಬರ್ಬರ ಹತ್ಯೆ
ಮುಂದಿನ ಲೇಖನಬೋಟ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ: 40 ದೋಣಿಗಳು ಬೆಂಕಿಗಾಹುತಿ