ಮನೆ ಅಪರಾಧ ಮಂಡ್ಯ: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ!

ಮಂಡ್ಯ: ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ!

0

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮಹಿಳೆಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಗಂಗಾ(38) ಕೊಲೆಯಾದ ದುರ್ದೈವಿ.

ಈಕೆ ತಮಿಳುನಾಡು ಮೂಲದ ನಿವಾಸಿಯಾಗಿದ್ದಳು.

ನಿಮಿಷಾಂಭ ದೇವಾಲಯ ಬಳಿಯ ಕಾವೇರಿ ನದಿಯಲ್ಲಿ ಕಾಸು ಹೆಕ್ಕುವ ಕಾಯಕ ಮಾಡುತ್ತಿದ್ದಳು.

ಕೊಲೆಯಾದ ಮಹಿಳೆಯ ಗುಂಪಿನ ಸದಸ್ಯರು ಎಲ್ಲರು ನಿರಾಶ್ರಿತರು. ಮೈಸೂರು- ಬೆಂಗಳೂರು ಮೇಲ್ಸೇತುವೆ ಕೆಳಗೆ ತಮ್ಮ ಗುಂಪಿನ ಜೊತೆ ಮೃತ ಮಹಿಳೆ ವಾಸ ಮಾಡುತ್ತಿದ್ದಳು.

ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನSSLC ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನ
ಮುಂದಿನ ಲೇಖನಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳ ಸಾವು