ಮನೆ ಸುದ್ದಿ ಜಾಲ ಫೀಲ್ಡ್  ಮಾರ್ಷಲ್  ಕಾರ್ಯಪ್ಪ ಅವರ 123ನೇ ಜಯಂತಿ

ಫೀಲ್ಡ್  ಮಾರ್ಷಲ್  ಕಾರ್ಯಪ್ಪ ಅವರ 123ನೇ ಜಯಂತಿ

0

ಮೈಸೂರು: ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ 123ನೇ ಜಯಂತಿ ಅಂಗವಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ವೃತ್ತದಲ್ಲಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ಮರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ  “ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು ಕರ್ನಾಟಕದ ಹೆಮ್ಮೆ, ಕೊಡಗಿನ ಸುಪುತ್ರ. ಮೊದಲನೇ ದಂಡನಾಯಕನ ಕೊಡುಗೆಯನ್ನು ಇಂದಿನ ಪೀಳಿಗೆ ಸಹ ನೆನೆಯುತ್ತಿರುವುದು ಸಂತೋಷದ ವಿಚಾರ” ಎಂದು ತಿಳಿಸಿದರು.

ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್  ಮಾತನಾಡಿ “ಕಾರಿಯಪ್ಪನವರ ಜಯಂತಿಯನ್ನು ಸರ್ಕಾರದ ವತಿಯಿಂದ ಪ್ರತಿ ವರ್ಷ ಆಚರಿಸುವಂತಾಕಬೇಕು, ಆಗ ಮತ್ತಷ್ಟು ಜನರು ಅವರನ್ನು ಸ್ಮರಿಸಿ ಗೌರವಿಸಲು ಸಾಧ್ಯವಾಗುತ್ತದೆ” ಎಂಬ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್,  ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ ನಾರಾಯಣಗೌಡ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಬಿಜೆಪಿ ಮುಖಂಡರಾದ ಮಹೇಶ್ ರಾಜ್ ಅರಸ್ ,ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ರಂಗನಾಥ್,ಎಸ್ ಎನ್ ರಾಜೇಶ್ ,ತಡೆ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್ ,ನವೀನ್  ಚಕ್ರಪಾಣಿ,ಶ್ರೀಕಾಂತ್ ಕಶ್ಯಪ್ ,ಪ್ರಶಾಂತ್ ,ಉಮೇಶ್ , ಹಾಗೂ ಇನ್ನಿತರರು ಹಾಜರಿದ್ದರು

ಹಿಂದಿನ ಲೇಖನಬೆಂಗಳೂರಿನಲ್ಲಿ ನಂದಿನಿ ನಕಲಿ ತುಪ್ಪ ಮಾರಾಟ ಜಾಲ ಪತ್ತೆಯಾಗಿರೋದು ಆತಂಕಕಾರಿ: ಡಿಕೆ ಶಿವಕುಮಾರ್
ಮುಂದಿನ ಲೇಖನಸಂಸದ ಪ್ರತಾಪ್‌ ಸಿಂಹ ವಿರುದ್ಧ ಶಾಸಕ ಎಲ್. ನಾಗೇಂದ್ರ ವಾಗ್ದಾಳಿ