ಮನೆ ರಾಜಕೀಯ ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು: ಸಿ.ಟಿ.ರವಿ

ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು: ಸಿ.ಟಿ.ರವಿ

0

ಬೆಳಗಾವಿ(Belagavi): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಸಲು ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು  ಗೆಲ್ಲಬೇಕಾಗಿದ್ದು, ಆದ್ದರಿಂದ ಈ ಜಿಲ್ಲೆಗಳಿಗೆ ಹೆಚ್ಚಿ ಒತ್ತು ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಬುಧವಾರ ಸುದ್ದಿಗಾರರ ಜತೆ ಮಾತನಾಡಿ ಅವರು, ಹಿಂದುತ್ವ ಮತ್ತು ಅಭಿವೃದ್ಧಿ ವಿಷಯದ ಆಧಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದರು.

ಅಮಿತ್‌ ಶಾ ಅವರು ಚುನಾವಣಾ ಚಾಣಕ್ಯ. ಅವರು ಯಾವ ಪಿಚ್‌’ನಲ್ಲಾದರೂ ಸರಿ ಆಡಬಲ್ಲ ಒಳ್ಳೆಯ ಆಟಗಾರ. ಒಂದೇ ಪಿಚ್‌ ಆದರೂ ಸರಿ, ಬೇರೆ ಬೇರೆ ಪಿಚ್‌ ಆದರೂ ಸರಿ ಉತ್ತಮವಾಗಿಯೇ ಆಡುತ್ತಾರೆ. ಹಳೇ ಮೈಸೂರು ಮಾತ್ರವಲ್ಲ ಇಡೀ ರಾಜ್ಯವನ್ನು ಫೋಕಸ್‌ ಮಾಡಿಕೊಂಡು ನಮ್ಮ ಗುರಿ ತಲುಪುತ್ತೇವೆ ಎಂದರು.

ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಅಧಿಕಾರಕ್ಕೆ ಬರುವುದು ಸುಲಭ. ಈ ಹಿಂದಿನ ಚುನಾವಣೆಯಲ್ಲಿ ನಾವು ಈ ಅಂಶವನ್ನು ಗುರುತಿಸಿದ್ದೇವೆ. ಈ ಭಾಗದಲ್ಲಿ ನಾವು ಜಾತಿ ಹೆಸರಿನಲ್ಲಿ ಚುನಾವಣೆ ಎದುರಿಸುವುದಿಲ್ಲ. ನಮ್ಮ ಐಡಿಯಾಲಜಿ ಮತ್ತು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ಒಂದು ಕಾಲದಲ್ಲಿ ಚಿಕ್ಕಮಗಳೂರು ಕಾಂಗ್ರಸ್‌’ನ ಭಧ್ರಕೋಟೆ ಆಗಿತ್ತು. ಈಗ ಜಿಲ್ಲಾಪಂಚಾಯಿತಿಯಿಂದ ಹಿಡಿದು, ಸಂಸತ್ತಿನವರೆಗೆ ಎಲ್ಲರೂ ಬಿಜೆಪಿಯವರೇ ಜನಪ್ರತಿನಿಧಿಗಳಿದ್ದಾರೆ ಎಂದು ರವಿ ಹೇಳಿದರು.

ಹಿಂದಿನ ಲೇಖನಮೈಸೂರಿನಲ್ಲಿ ನೂತನ ವಿಜಯನಗರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಪ್ರಾರಂಭ
ಮುಂದಿನ ಲೇಖನಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಆಸ್ಪತ್ರೆಗೆ ದಾಖಲು