ಮನೆ ಸುದ್ದಿ ಜಾಲ ಡಿಲೀಟ್ ಮಾಡಿದರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರತಾಪ್ ಸಿಂಹ ಟ್ವೀಟ್

ಡಿಲೀಟ್ ಮಾಡಿದರೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರತಾಪ್ ಸಿಂಹ ಟ್ವೀಟ್

0

ಮೈಸೂರು: ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಾಪ್‌ ಸಿಂಹ ಮಕ್ಕಳಿಗೆ ಬುದ್ದಿ ಹೇಳಿ ತಕ್ಷಣವೇ ತಮ್ಮ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದರೂ ಕೂಡ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯದ ಪಿಇಎಸ್‌ ಕಾಲೇಜಿನಲ್ಲಿ ಬುರ್ಕಾ ಧರಿಸಿ ಬಂದಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಎದುರಿಗೆ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲನ್ನು ಹೊದ್ದು ಜೈ ಶ್ರೀರಾಮ್‌ ಘೋಷಣೆ ಕೂಗುತ್ತಾ, ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ್ದಾರೆ. ಇದಕ್ಕೆ ಆ ವಿದ್ಯಾರ್ಥಿನಿಯೂ ಪ್ರತಿರೋಧ ತೋರಿ, ಅಲ್ಲಾ ಹು ಅಕ್ಬರ್‌ ಘೋಷಣೆ ಕೂಗಿದ್ದಾಳೆ. ಈ ವಿಡಿಯೋ ವೈರಲ್‌ ಆಗಿ, ಪರ ವಿರೋಧ ಚರ್ಚೆ ಏರ್ಪಟ್ಟಿತ್ತು.

ಇದಕ್ಕೆ ಸಂಸದ ಪ್ರತಾಪ್‌ ಸಿಂಹ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿ “ಇದು ಸರಿಯಲ್ಲ, ಹೀಗೆ ಮಾಡಬೇಡಿ ಮಕ್ಕಳೇ, ನಿಮಗೆ ಆ ಹುಡುಗಿಯ ಜೊತೆಗೆ ಹಾಗೆ ನಡೆದುಕೊಳ್ಳುವ ಅಧಿಕಾರವಿಲ್ಲʼ ಎಂದಿದ್ದರು.
ಆದರೆ ಟ್ವೀಟ್‌ ಮಾಡಿದ ಕೆಲ ಹೊತ್ತಲ್ಲೇ ಅದನ್ನು ಡಿಲೀಟ್‌ ಮಾಡಿಕೊಂಡಿದ್ದಾರೆ. ಆದರೆ ಈ ಟ್ವೀಟ್ ನ  ಸ್ಕ್ರೀನ್‌ಶಾಟ್‌ ಅನ್ನು ತೆಗೆದುಕೊಂಡಿರುವ ಕೆಲವರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಹಿಂದಿನ ಲೇಖನಹಿಜಾಬ್ ವಿವಾದ: ಮುಸ್ಲಿಂ ಮಹಿಳೆಯರ ಪರ ಪ್ರಿಯಾಂಕಾ ಗಾಂಧಿ ಟ್ವೀಟ್
ಮುಂದಿನ ಲೇಖನನ್ಯಾಯಾಲಯದ ತೀರ್ಪನ್ನು ನೋಡಿಕೊಂಡು ಮುಂದಿನ ತೀರ್ಮಾನ: ಬಿ.ಸಿ.ನಾಗೇಶ್