ಮನೆ ಮನರಂಜನೆ ಬಿಡುಗಡೆಗೆ ಸಜ್ಜಾದ “ನಮೋ ಭೂತಾತ್ಮ 2” ಚಿತ್ರ

ಬಿಡುಗಡೆಗೆ ಸಜ್ಜಾದ “ನಮೋ ಭೂತಾತ್ಮ 2” ಚಿತ್ರ

0

ಬೆಂಗಳೂರು: ನಟ ಕೋಮಲ್ ಕುಮಾರ್ “ನಮೋ ಭೂತಾತ್ಮ 2” ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

Join Our Whatsapp Group

ನಮೋ ಭೂತಾತ್ಮ 2 ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ನೃತ್ಯ ನಿರ್ದೇಶಕ ಮುರಳಿ ನಿರ್ದೇಶನ ಹಾಗೂ ಕೋಮಲ್ ಅಭಿನಯದ ಚಿತ್ರದ ಟೀಸರ್ ಅ​ನ್ನು ಧ್ರುವ ಸರ್ಜಾ ಬಿಡುಗಡೆ ಮಾಡುವ ಮೂಲಕ ಕೋಮಲ್​ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.

ಟೀಸರ್ ಬಿಡುಗಡೆಗೊಳಿಸಿ ಮಾತನಾಡಿದ ಧ್ರುವ ಸರ್ಜಾ, “ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ. ಅವರ ಅಭಿನಯದ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ಚಿತ್ರದ ಬಿಡುಗಡೆಗೂ ಕಾಯುತ್ತಿದ್ದೇನೆ. ಮುರಳಿ ಮಾಸ್ಟರ್ ಅವರು ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. “ನಮೋ ಭೂತಾತ್ಮ 2″ ಸೂಪರ್ ಹಿಟ್ ಆಗಲಿ” ಎಂದು ಹರಸಿದರು.

ಕೋಮಲ್ ಮಾತನಾಡಿ, “ನಾನು ನಿರ್ಮಿಸಿ ನಟಿಸಿದ್ದ ಮುರಳಿ ಮಾಸ್ಟರ್ ನಿರ್ದೇಶಿಸಿದ್ದ “ನಮೋ ಭೂತಾತ್ಮ” ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುರಳಿ ಮಾಸ್ಟರ್ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ “ನಮೋ ಭೂತಾತ್ಮ 2″ ನಮ್ಮಿಬ್ಬರ ಕಾಂಬಿನೇಶನ್​ ನಲ್ಲಿ ಬರುತ್ತಿದೆ‌. ಮೊದಲ ಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾರಿಗೆ ಧನ್ಯವಾದ” ಎಂದರು.

ಯುವ ನಟಿ ಲೇಖಾ ಚಂದ್ರ ಅಭಿನಯಿಸಿದ್ದಾರೆ. ‌ಜಿ.ಜಿ. ಮೋನಿಕಾ, ವರುಣ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ನಿರ್ಮಾಪಕ ಸಂತೋಷ್ ನಿರ್ಮಾಣ ಮಾಡಿದ್ದಾರೆ.

ಹಿಂದಿನ ಲೇಖನಜುಲೈನಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಕಾರುಗಳು
ಮುಂದಿನ ಲೇಖನಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ