ಮನೆ ರಾಷ್ಟ್ರೀಯ ಮಹಾರಾಷ್ಟ್ರ ಬಿಕ್ಕಟ್ಟಿಗೆ ಹೊಸ ತಿರುವು: ಟ್ವೀಟ್ ನಲ್ಲಿ ಏಕನಾಥ್ ಶಿಂಧೆ ಸ್ಫೋಟಕ ಮಾಹಿತಿ

ಮಹಾರಾಷ್ಟ್ರ ಬಿಕ್ಕಟ್ಟಿಗೆ ಹೊಸ ತಿರುವು: ಟ್ವೀಟ್ ನಲ್ಲಿ ಏಕನಾಥ್ ಶಿಂಧೆ ಸ್ಫೋಟಕ ಮಾಹಿತಿ

0

ಮಹಾರಾಷ್ಟ್ರ ಸರ್ಕಾರದ ವಿರುದ್ದ ಬಂಡಾಯ ಬಾವುಟ ಹಾರಿಸಿರುವ ಶಿವಸೇನೆಯ ಶಾಸಕರನ್ನು ಅನರ್ಹಗೊಳಿಸದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವ ಬೆನ್ನಲ್ಲೇ  ಭಿನ್ನಮತೀಯ ಗುಂಪಿನ ನಾಯಕ ಏಕನಾಥ್ ಶಿಂಧೆ, ಭಾನುವಾರ (ಜೂನ್ 26) ರಾತ್ರಿ ಮಾಡಿದ ಟ್ವೀಟ್ ಸಂಚಲನ ಮೂಡಿಸಿದೆ.

ಸಿಎಂ ಉದ್ದವ್ ಠಾಕ್ರೆ ವಿರುದ್ದ ಸಿಡಿದೇಳಲು ಕಾರಣವೇನು ಎನ್ನುವುದನ್ನು ಶಿಂಧೆ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಶಿಂಧೆಯವರ ಟ್ವೀಟ್ ಹಲವು ಚರ್ಚೆಗೆ ನಾಂದಿ ಹಾಡಿದ್ದು, ಶಿವಸೇನೆಯ ಪ್ರಭಾವಿ ಮುಖಂಡ ಸಂಜಯ್ ರಾವತ್ ಅವರನ್ನು ಟ್ಯಾಗ್ ಮಾಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮರಾಠಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ “ಮುಂಬೈ ಬಾಂಬ್ ಸ್ಫೋಟ ನಡೆಸಿ ಅಮಾಯಕ ಮುಂಬೈಗರನ್ನು ಕೊಂದ ದಾವೂದ್ ಇಬ್ರಾಹಿಂ ನೊಂದಿಗೆ ನೇರ ಸಂಪರ್ಕ ಹೊಂದಿರುವ, ಹಿಂದೂ ಹೃದಯ ಚಕ್ರವರ್ತಿ ವಂದನಿಯಾ ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆ ಹೇಗೆ ಬೆಂಬಲಿಸುತ್ತದೆ? ಇದನ್ನು ವಿರೋಧಿಸಿ ನಾವಿಟ್ಟ ಹೆಜ್ಜೆ ಇನ್ನೂ ಉತ್ತಮ, ಇದು ನಮ್ಮೆಲ್ಲರನ್ನೂ ಸಾವಿನ ಅಂಚಿಗೆ ಕೊಂಡೊಯ್ದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಹಿಂದೂ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಶಿಂಧೆ ಮಾಡಿರುವ ಟ್ವೀಟ್ 8,500ಕ್ಕೂ ಅಧಿಕ ಬಾರಿ ರಿಟ್ವೀಟ್ ಆಗಿದ್ದು, ಆ ಟ್ವೀಟಿಗೆ ಸಂಜಯ್ ರಾವತ್ ಅವರನ್ನೂ ಟ್ಯಾಗ್ ಮಾಡಲಾಗಿದೆ. ಇನ್ನೊಂದು ಟ್ವೀಟ್ ಮಾಡಿರುವ ಶಿಂಧೆ, “ಹಿಂದೂ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವದ ಚಿಂತನೆಗಳಿಗೆ ಮತ್ತು ಬಾಳಾಸಾಹೇಬರ ಶಿವಸೇನೆಯನ್ನು ಉಳಿಸಲು ನಾವು ಮಡಿದರೂ ಉತ್ತಮವೇ. ಅದು ಸಂಭವಿಸಿದಲ್ಲಿ, ನಾವೆಲ್ಲರೂ ಅದೃಷ್ಟಶಾಲಿಗಳು”ಎಂದು ಏಕನಾಥ್ ಶಿಂಧೆ ಇನ್ನೊಂದು ಟ್ವೀಟ್ ಅನ್ನು ಮಾಡಿದ್ದಾರೆ. ಸುಪ್ರೀಂಕೋರ್ಟ್ ಜುಲೈ 11ರವರೆಗೆ ವಿಚಾರಣೆಯನ್ನು ಮುಂದೂಡಿದೆ ಏಕನಾಥ್ ಶಿಂಧೆಯವರ ಟ್ವೀಟ್ ಅನ್ನು ಅವಲೋಕಿಸಿದರೆ ಅವರ ಜೊತೆಗಿರುವ ಅಷ್ಟೂ ಶಾಸಕರಿಗೆ ದಾವೂದ್ ಇಬ್ರಾಹಿಂ ಲಿಂಕ್ ಸಿಎಂ ಠಾಕ್ರೆ ಜೊತೆ ಸಿಡಿದೇಳಲು ಕಾರಣವಾಯಿತೇ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಹಿಂದಿನ ಲೇಖನಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ: ಬಿಜೆಪಿ ವ್ಯಂಗ್ಯ ಟೀಕೆ
ಮುಂದಿನ ಲೇಖನಆರೋಗ್ಯ ಕಾರ್ಯಕರ್ತರನ್ನು ಕರ್ತವ್ಯ ನಿರ್ವಹಿಸದಂತೆ ತಡೆಯುವುದು ಕೂಡ ಜಾಮೀನು ರಹಿತ ಅಪರಾಧ: ಕೇರಳ ಹೈಕೋರ್ಟ್