ವಿಜಯಪುರ : ಪಂಚನದಿಗಳ ಬೀಡು ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ಇದೀಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಜಿಲ್ಲೆಯ ಜನರು ನೀರಿಗಾಗಿ ಕೃಷ್ಣಾ ನದಿ ಮೇಲೆ ಅವಲಂಬಿತರಾಗಿದ್ದಾರೆ.
ಪಕ್ಕದ ಬಾಗಲಕೋಟೆ ಜಿಲ್ಲೆ ಕೂಡ ಕೃಷ್ಣಾ ನದಿ ಮೇಲೆ ಅವಲಂಬಿತವಾಗಿದೆ. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗೆ ಆಲಮಟ್ಟಿ ಜಲಾಶಯದಿಂದಲೇ ನೀರು ಸಪ್ಲೈ ಆಗುತ್ತದೆ. ಆದರೆ ಸದ್ಯ ಜಲಾಶಯದಲ್ಲಿ 9 ಟಿಎಂಸಿ ನೀರು ಮಾತ್ರ ಬಳಕೆಗೆ ಸಂಗ್ರಹವಿದ್ದು, ಇಷ್ಟರಲ್ಲಿಯೇ ಜೂನ್ ತಿಂಗಳು ಕೂಡ ಕಳೆಯಬೇಕಾಗಿದೆ. ಇದರಿಂದ ಅವಳಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಈಗಾಗಲೇ ಜಿಲ್ಲೆಯಲ್ಲಿ ಕೆಲವು ಕಡೆ ವಾರಕೊಮ್ಮೆ ನೀರು ಬಂದ್ರೆ, ಕೆಲವೆಡೆ 15 ದಿನಕ್ಕೆ ನೀರು ಬರ್ತಿವೆ. ಇನ್ನು ಜಿಲ್ಲೆಯಲ್ಲಿ ಬಿಸಿಲು ಕೂಡ ಹಿಂದೆಂದು ಕಂಡರಿಯದಂತೆ ಹೆಚ್ಚಿದೆ. ಇದರಿಂದ ಬಾಷ್ಟೀಕರಣ ಕೂಡ ಈ ಬಾರಿ ಹೆಚ್ಚಾಗಿದೆ. ಇನ್ನೂ ಈ ಬಾರಿ ಜೂ.15ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹೀಗಾಗಿ ಇನ್ನೊಂದು ತಿಂಗಳು 9 ಟಿಎಂಸಿ ನೀರಿನಲ್ಲೇ ಜನರು, ಜಾನುವಾರುಗಳು ಜೀವನ ನಡೆಸಬೇಕಿದೆ. ಇತ್ತ ಜಿಲ್ಲೆಯ ಭೀಮಾ ನದಿ ಕೂಡ ಸಂಪೂರ್ಣ ಖಾಲಿ ಆಗಿದ್ದು, ಒಂದು ವೇಳೆ ಜೂನ್ನಲ್ಲಿ ಮಳೆ ಆಗದಿದ್ರೆ ಅವಳಿ ಜಿಲ್ಲೆಯಲ್ಲಿ ನೀರಿಗಾಗಿ ಬಡಿದಾಟ ಶುರುವಾಗಲಿದೆ.
















