ಮನೆ ರಾಷ್ಟ್ರೀಯ ಕಾರ್ಯಾಚರಣೆ ವಿಫಲ: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

ಕಾರ್ಯಾಚರಣೆ ವಿಫಲ: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

0

ಮಧ್ಯಪ್ರದೇಶ(Madya Pradesh): ರಾಜ್ಯದ ಬೇತುಲ್ ಜಿಲ್ಲೆಯಲ್ಲಿ ಬೋರ್‌’ವೆಲ್‌ಗೆ ಬಿದ್ದು 55 ಅಡಿ ಆಳದಲ್ಲಿ ಸಿಲುಕಿದ್ದ 8 ವರ್ಷದ ಮಗುವನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಮಗು ಸಾವನ್ನಪ್ಪಿದೆ ಎಂದು ಬೇತುಲ್ ಜಿಲ್ಲಾಡಳಿತ ಮಾಹಿತಿ ನೀಡಿದೆ.

70 ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯಲ್ಲಿ ಬಾಲಕ ತನ್ಮಯ್‌’ನನ್ನು ಉಳಿಸಲು ಸಾಧ್ಯವಾಗಲಿಲ್ಲ. ರಕ್ಷಣಾ ಕಾರ್ಯಾಚರಣೆ ವಿಫಲವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯಾಚರಣೆ ಸಿಬ್ಬಂದಿ ಬಾಲಕನ ಶವವನ್ನು ಕೊಳವೆ ಬಾವಿಯಿಂದ ಮೇಲಕ್ಕೆ ತಂದರು. ಕೊಳವೆ ಬಾವಿಗೆ ಸಮಾನಾಂತರವಾಗಿ 35 ಅಡಿ ಆಳದವರೆಗೆ ಮತ್ತೊಂದು ಗುಂಡಿ ತೋಡಿ ಬಾಲಕನನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿತ್ತು. ಬೋರ್‌ವೆಲ್‌ ಒಳಗೆ ಅಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು ಹಾಗೂ ಸಿಸಿ ಕ್ಯಾಮೆರಾ ಅಳವಡಿಸಿ ಮಗುವಿನ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು.ಮಂಗಳವಾರ ಸಂಜೆಯಿಂದಲೇ ಬಾಲಕನಿಂದ ಯಾವುದೇ ಚಲನವಲನ ಕಂಡುಬಂದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಹಿಂದಿನ ಲೇಖನಖಾಸಗಿ ಬಸ್- ಕಾರು ನಡುವೆ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು
ಮುಂದಿನ ಲೇಖನಗಡಿವಿವಾದ: ಡಿ.12 ರಂದು ರಾಜ್ಯ ಸಂಸದರ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ- ಸಿಎಂ ಬೊಮ್ಮಾಯಿ