ಮನೆ ಯೋಗಾಸನ ಪಾದಹಸ್ತಾಸನ

ಪಾದಹಸ್ತಾಸನ

0

ಪಾದಹಸ್ತಾಸನಕ್ಕೆ ‘ಹಸ್ತಪಾದೋತ್ತಾನಾಸ’ ಹಾಗೂ ‘ಭೂ ಸ್ಪಷ್ಟಪಾದ ಜಾನು ಭಾಲಾಸನ’ ಎಂಬ ಹೆಸರುಗಳೂ ಇವೆ.

Join Our Whatsapp Group

ಮಾಡುವ ಕ್ರಮ

1)    ಮೊದಲು ಭೂಮಿಗೆ ಲಂಭವಾಗಿ, ನೇರವಾಗಿ ನಿಲ್ಲಬೇಕು.

2)   ಅನಂತರ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಬೇಕು.

3)    ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಬಗ್ಗಿ ನೆಲವನ್ನು ಮುಟ್ಟಬೇಕು. ಆದರೆ ಮುಂದಕ್ಕೆ ಬಗ್ಗುವಾಗ ಸೊಂಟವನ್ನಾಗಲಿ ಅಥವಾ ಮೊಣಕಾಲುಗಳನ್ನಾಗಲಿ ಬಗ್ಗಿಸದಿರುವತ್ತ ಗಮನ ವಹಿಸಬೇಕು. ಮೊದಲು ಭೂಮಿಯನ್ನು ಮುಟ್ಟುವುದು, ಅನಂತರ ಭೂಮಿಯ ಮೇಲೆ ಅಂಗೈಯನ್ನು  ಊರುವುದು, ನಂತರ ಕಾಲಿನ ಗಂಟುಗಳನ್ನು ಹಿಡಿದುಕೊಂಡು ಮೊಣಕಾಲಿಗೆ ತಲೆಯನ್ನು ತಾಗಿಸುವುದು, ಅನಂತರ ಎದೆಯನ್ನು ಮಂಡಿಗೆ ತಾಗಿಸಲು ಪ್ರಯತ್ನಿಸಬಹುದು. ಆದರೆ ಯಾವುದೇ  ಭಂಗಿಯಲ್ಲೂ ಶರೀರವನ್ನು ಭೂಮಿಗೆ ಲಂಬವಾಗಿರಿಸುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಲಾಭಗಳು

ಪಾದಹಸ್ತಾಸನ ಅಭ್ಯಾಸದಿಂದ ಹೊಟ್ಟೆ, ಪಿತ್ತಜನಕಾಂಗ, ಮೀನಖಂಡ, ಸೊಂಟ ಹಾಗೂ ತೊಡೆಗಳಲ್ಲಿನ ಅನೇಕ ದೋಷಗಳು ನಿವಾರಣೆಯಾಗುವವು. ಮಲಬದ್ಧತೆಯೂ ಸಾಕಷ್ಟು ನಿವಾರಣೆಯಾಗುವುದಲ್ಲದೆ ಬೊಜ್ಜು ಕರಗುವುದು. ಬೆನ್ನಿಗೆ ಸರಿಯಾದ ವ್ಯಾಯಾಮ ದೊರೆಯುವುದು. ವಿಶೇಷವಾಗಿ ಪಾದಹಸ್ತಾಸನದ ಅಭ್ಯಾಸದಿಂದ ಜೀರ್ಣರಸದ ಉತ್ಪತ್ತಿಯು ಹೆಚ್ಚುವುದು.

ಹಿಂದಿನ ಲೇಖನಮಧುಮೇಹಿಗಳಿಗೆ ದ್ರಾಕ್ಷಿ ಉತ್ತಮ ಆಯ್ಕೆ
ಮುಂದಿನ ಲೇಖನಹಾಸ್ಯ